ವಾರದ ವಿಜ್ಞಾನಿ

ಜಾಣಸುದ್ದಿ ಧ್ವನಿಪತ್ರಿಕೆ (https://open.spotify.com/show/3sxXTxFDsJdkwlVHGUEJ09) ಪ್ರತಿವಾರವೂ ಆ ವಾರ ಜನಿಸಿದ ಪ್ರಮುಖ ವಿಜ್ಞಾನಿಯೊಬ್ಬರ ಬದುಕು ಹಾಗೂ ಸಾಧನೆಗಳ ಕಿರುಪರಿಚಯವನ್ನು ಮಾಡಿಕೊಡುತ್ತಿದೆ. ಈ ಅಂಕಣದ ಪಾಠವನ್ನು ಚಿತ್ರದ ರೂಪದಲ್ಲಿ ಹಂಚಲಾಗುತ್ತಿತ್ತು. ಕೇಳುಗ ಶಿಕ್ಷಕರೊಬ್ಬರು ಅದರ ಪಾಠ ಹಾಗೂ ಚಿತ್ರಗಳನ್ನು ಪಿಡಿಎಫ್‌ ರೂಪದಲ್ಲಿ ಕೊಡುವುದು ಸಾಧ್ಯವೇ ಎಂದು ವಿನಂತಿಸಿದ್ದರು. ಇದೋ ಆನ್‌ಲೈನ್‌ ಓದಬಯಸುವವರು ಈ ಕೊಂಡಿಯನ್ನು ಬಳಸಬಹುದು.

https://flipbookpdf.net/web/site/b239e2218838a14e6984c034480c544a135183a7202310.pdf.html

ಡೌನ್‌ಲೋಡ್‌ ಮಾಡಿಕೊಳ್ಳಬೇಕೆನ್ನುವವರು ಈ ಕೊಂಡಿಯನ್ನು ಬಳಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

https://drive.google.com/file/d/1pGiyYqXAZNAQ0Ya3Hc_38JBjhDs2BMHF/view?usp=sharing

ಬೀಗಲ್ ಸಾಹಸಯಾನ 15

ನಾನು ದಕ್ಷಿಣಾರ್ಧಗೋಳದ ವಿವಿಧ ಜಾಗೆಗಳಲ್ಲಿ ಏನಿಲ್ಲವೆಂದರೂ ಹನ್ನೆರಡು ವಿಭಿನ್ನ ನೆಲವಾಸಿ ಪ್ಲನೇರಿಯಾಗಳನ್ನು ಕಂಡಿದ್ದೇನೆ. ವ್ಯಾನ್ ಡೀಮನ್ನನ ತೋಟದಲ್ಲಿ ಸಿಕ್ಕಿದವುಗಳಲ್ಲಿ ಕೆಲವನ್ನು ಕೊಳೆತ ಮರದ ತುಂಡುಗಳನ್ನು ತಿನ್ನಿಸಿ ಹೆಚ್ಚೂ ಕಡಿಮೆ ಎರಡು ತಿಂಗಳವರೆಗೆ ಬದುಕಿಸಿದ್ದೆ. ಅವುಗಳಲ್ಲಿ ಒಂದನ್ನು ನಡುಮಧ್ಯದಲ್ಲಿ ಎರಡು ಸಮಭಾಗಗಳಾಗಿ ಕತ್ತರಿಸಿದ್ದೆ. ಹದಿನೈದು ದಿನಗಳೊಳಗೆ ಅವು ಎರಡೂ ಎರಡು ಅಚ್ಚುಕಟ್ಟಾದ ಜೀವಿಗಳಾಗಿಬಿಟ್ಟಿದ್ದುವು. ಅದರ ದೇಹವನ್ನು ಹೇಗೆ ಕತ್ತರಿಸಿದ್ದೆನೆಂದರೆ ಒಂದು ತುಂಡಿನಲ್ಲಿ ಮಾತ್ರ ತಳದಲ್ಲಿದ್ದ ಎರಡು ರಂಧ್ರಗಳು ಇದ್ದುವು. ಹೀಗಾಗಿ ಮತ್ತೊಂದು ತುಂಡಿನಲ್ಲಿ ಏನೂ ಇರಲಿಲ್ಲ. ಈ ಶಸ್ತ್ರಕ್ರಿಯೆ ಕಳೆದು ಇಪ್ಪತ್ತೈದು ದಿನಗಳಾದ ಮೇಲೆ ಇವುಗಳಲ್ಲಿ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಿ ಗುರುತಿಸಲಾಗದಂತಾಗಿದ್ದುವು. ಎರಡನೆಯ ತುಂಡು ಗಾತ್ರದಲ್ಲಿ ಹೆಚ್ಚು ಬೆಳೆದಿತ್ತು. ಅದರ ಹಿಂಭಾಗದಲ್ಲಿದ್ದ ಪ್ಯಾರೆಂಕೈಮಾ ಅಂಗಾಂಶದಲ್ಲಿ ಪುಟ್ಟ ಬಾಯಿಯಂತೆ ಕಾಣುವ ಬಟ್ಟಲಿನಾಕಾರವು ಸ್ಪಷ್ಟವಾಗಿತ್ತು. ಆದರೆ ಕೆಳಭಾಗದಲ್ಲಿ ಯಾವುದೇ ಸೀಳು ಇನ್ನೂ ಬೆಳೆದಿರಲಿಲ್ಲ. ನಾವು ಸಮಭಾಜಕ ವೃತ್ತವನ್ನು ಸಮೀಪಿಸಿದಂತೆ ಹೆಚ್ಚಿದ ತಾಪಮಾನ ಈ ಜೀವಿಗಳನ್ನು ನಾಶಮಾಡದೇ ಇದ್ದಿದ್ದರೆ ಈ ಕೊನೆಯ ರಚನೆಯೂ ಪೂರ್ಣವಾಗುತ್ತಿತ್ತು ಎನ್ನುವುದರಲ್ಲಿ ನನಗೆ ಸಂದೇಹವೇ ಇಲ್ಲ. ಇಷ್ಟೊಂದು ಜನಪ್ರಿಯ ಪ್ರಯೋಗವೇ ಆಗಿದ್ದರೂ, ಆ ಪ್ರಾಣಿಯ ಸರಳವಾದ ಮತ್ತೊಂದು ಅರ್ಧದಲ್ಲಿ ಪ್ರತಿಯೊಂದು ಅವಶ್ಯಕ ಅಂಗವೂ ರೂಪುಗೊಳ್ಳುತ್ತಿರುವುದನ್ನು ನೋಡುವುದೇ ಕೌತುಕದ ವಿಷಯ. ಪ್ಲಾನೇರಿಯಾಗಳನ್ನು ಕಾಯ್ದುಕೊಳ್ಳುವುದು ಬಲು ಕಷ್ಟ.  ಜೀವವೆನ್ನುವುದು ಕೊನೆಗೊಂಡು ನೈಸರ್ಗಿಕ ಪರಿವರ್ತನೆಗಳಿಗೆ ಎಡೆ ಮಾಡಿಕೊಟ್ಟ ಕೂಡಲೇ ಅವುಗಳ ದೇಹವಿಡೀ ಮೃದುವಾಗಿ, ನೀರಿನಂತಾಗಿಬಿಡುತ್ತದೆ. ಇಷ್ಟು ವೇಗವಾದ ಪರಿವರ್ತನೆಯನ್ನು ನಾನು ಇನ್ನೆಲ್ಲೂ ಕಂಡಿಲ್ಲ.

ಈ ಪ್ಲಾನೇರಿಯಾಗಳಿದ್ದ ಕಾಡಿಗೆ ನಾನು ಮೊದಲು ಹೋದದ್ದು ಬೇಟೆಗೆಂದು ನನ್ನನ್ನು ಅಲ್ಲಿಗೆ ಕರೆದೊಯ್ದ ಪೋರ್ತುಗೀಯ ಪಾದ್ರಿಯೊಬ್ಬರ ಜೊತೆಗೆ. ಕೆಲವು ನಾಯಿಗಳನ್ನು ಛೂ ಬಿಟ್ಟು ಅವುಗಳು ಹೊರಗಟ್ಟಿದ ಯಾವುದೇ ಪ್ರಾಣಿಯ ಮೇಲೆ ಗುಂಡು ಹಾರಿಸುವುದೇ ಈ ಬೇಟೆಯ ಆಟವಾಗಿತ್ತು. ನೆರೆಯ ತೋಟದ ಮಾಲೀಕನ ಮಗನೂ ನಮ್ಮ ಜೊತೆಗೆ ಇದ್ದ. ಆತನೋ ಪಕ್ಕಾ ಬ್ರೆಜಿಲಿ ಯುವಕ. ತೂತು ಬಿದ್ದು ಜೂಲಾದ ಹಳೆಯ ಶರಟು, ಟ್ರೌಸರುಗಳನ್ನು ಧರಿಸಿದ್ದ. ತಲೆಯ ಮೇಲೇನೂ ಇರಲಿಲ್ಲ. ಹಳೆಯ ಕಾಲದ ಬಂದೂಕನ್ನೂ, ದೊಡ್ಡ ಕತ್ತಿಯನ್ನೂ ಹೊತ್ತಿದ್ದ. ಹೀಗೆ ಕತ್ತಿಯನ್ನು ಹೊತ್ತೊಯ್ಯುವುದು ಅಲ್ಲಿ ಸರ್ವೇ ಸಾಮಾನ್ಯವಾದ ಅಭ್ಯಾಸ. ಅಲ್ಲಿನ ಕಾಡುಗಳಲ್ಲಿ ದಟ್ಟವಾಗಿ ಹರಡಿಕೊಂಡಿರುವ ಬಳ್ಳಿಗಳಿಂದಾಗಿ ಇದು ಅವಶ್ಯಕವೂ ಹೌದು. ಈ (ಕತ್ತಿಯನ್ನು ಹೊತ್ತೊಯ್ಯುವ) ಅಭ್ಯಾಸವೇ ಅಲ್ಲಿ ಆಗಾಗ್ಗೆ ನಡೆಯುವ ಕೊಲೆಗಳಿಗೂ ಒಂದು ಕಾರಣವೆನ್ನಬಹುದು. ಬ್ರೆಜಿಲಿಯನ್ನರಿಗೆ ಕತ್ತಿಯನ್ನು ಬಳಸುವುದರಲ್ಲಿ ಎಷ್ಟು ಚಾಕಚಕ್ಯತೆ ಇದೆ ಎಂದರೆ  ಮಾರಣಾಂತಿಕವಾಗಿ ಗಾಯವಾಗುವಷ್ಟು ಜೋರಾಗಿ ಅದನ್ನು ಗುರಿಯಿಟ್ಟು ಸಾಕಷ್ಟು ದೂರದವರೆಗೆ ಎಸೆಯಬಲ್ಲರು. ಪುಟ್ಟ ಹುಡುಗರೂ ಇದನ್ನು ಆಟವೆಂಬಂತೆ ಅಭ್ಯಾಸ ಮಾಡುವುದನ್ನು ನಾನು ಕಂಡಿದ್ದೇನೆ. ನೆಟ್ಟಗೆ ಹೂತ ಕಡ್ಡಿಯೊಂದನ್ನು ಗುರಿಯಿಟ್ಟು ತಾಕುವಂತೆ ಅವರು ಆಡುತ್ತಿದ್ದ ಈ ಆಟ, ಮುಂದೆ ಅವರು ಇನ್ನೇನೇನು ಸಾಹಸ ಮಾಡಬಹುದು ಎಂಬುದರ ಸೂಚನೆಯಾಗಿತ್ತು. ಒಂದು ದಿನ ಹಿಂದೆ ನನ್ನ ಜೊತೆಗಾರನು ಎರಡು ದೊಡ್ಡ ಗಡ್ಡದ ಕೋತಿಗಳನ್ನು ಬೇಟೆಯಾಡಿದ್ದ. ಈ ಮಂಗಗಳ ಬಾಲ ಕೈಯಂತೆ ಹಿಡಿದುಕೊಳ್ಳಬಲ್ಲುದು. ಮಡಚಿಕೊಳ್ಳಬಲ್ಲುದು. ಸತ್ತ ಮೇಲೆ ಕೂಡ ಇದು ಇಡೀ ಮಂಗದ ಭಾರವನ್ನು ತಾಳಿಕೊಳ್ಳಬಲ್ಲುದು. ಒಂದು ಸತ್ತ ಮಂಗವು ಹೀಗೇ ಮರಕ್ಕೆ ಅಂಟಿಕೊಂಡಿತ್ತು. ಅದನ್ನು ಕೆಳಗಿಳಿಸಲು ಇಡೀ ಮರವನ್ನೇ ಕತ್ತರಿಸಬೇಕಾಯಿತು.  ಕತ್ತರಿಸಿದ ಕೂಡಲೇ ಇಡೀ ಮರ ಮಂಗದ ಜೊತೆಗೇ ಧಡಾರನೆ ಕೆಳಗೆ ಬಿತ್ತು. ಮಂಗಗಳನ್ನು ಬಿಟ್ಟರೆ ನಮ್ಮ ಬೇಟೆ ಕೆಲವು ಹಸಿರು ಗಿಳಿಗಳು ಹಾಗೂ ಟೌಕನ್ ಹಕ್ಕಿಗಳು. ಟೌಕನ್ ಹಕ್ಕಿಗಳು ಗಿಳಿಗಳಂತೆಯೇ ಇರುವ ಆದರೆ ದೊಡ್ಡ ಕೊಕ್ಕಿನ ಬಣ್ಣ, ಬಣ್ಣದ ಪಕ್ಷಿಗಳು. ಈ ಪೋರ್ತುಗೀಸ ಪಾದ್ರಿಯ ಸಹವಾಸದಿಂದ ಇನ್ನೊಂದು ಸಂದರ್ಭದಲ್ಲಿಯೂ ಲಾಭವಾಯಿತು. ಆತ ನನಗೆ ಯಗೋರಾಂಡಿ ಬೆಕ್ಕೊಂದನ್ನು ನೀಡಿದ. ಬೋಟೋಫೋಗೋ ಬಳಿಯ ಸುಂದರ ದೃಶ್ಯಗಳ ಬಗ್ಗೆ ನಾವೆಲ್ಲ ಬಹಳ ಕೇಳಿದ್ದೆವು. ನಾನಿದ್ದ ಮನೆ ಸುಪ್ರಸಿದ್ಧ ಕೋರ್ಕೊವಾಡೋ ಪರ್ವತದ ತಳದಲ್ಲಿತ್ತು. ಅಪ್ಪಟ ಶಂಕುವಿನಾಕಾರದಲ್ಲಿರುವ ಗುಡ್ಡಗಳು  ಬಹುತೇಕ ಹಂಬೋಲ್ಟ್ ಹೇಳುವ ನೀಸ್ ಗ್ರಾನೈಟು ಶಿಲೆಗಳಿಂದಲೇ ಆಗಿರುತ್ತವೆ ಎನ್ನುವ ನಂಬಿಕೆ ಇದೆ. ಇದು ಸತ್ಯವೂ ಕೂಡ. ಇಂತಹ ಭರ್ಜರಿ ಕಾಡಿನ ನಡುವೆ ಎದ್ದು ನಿಲ್ಲುವ ಬೃಹತ್ ಸ್ವರೂಪದ ಈ ನಗ್ನ ಶಿಲೆಗಳನ್ನು ನೋಟದಲ್ಲಿ ಮೀರಿಸುವಂಥವು ಇನ್ಯಾವುವೂ ಇಲ್ಲ.

ಆಗಾಗ್ಗೆ ಮೋಡಗಳನ್ನು ನೋಡುತ್ತಾ ಕೂರುವುದರಲ್ಲಿಯೂ ನನಗೆ ಆಸಕ್ತಿ ಇತ್ತು. ಸಾಗರದ ಕಡೆಯಿಂದ ಉರುಳುತ್ತಾ ಬಂದ ಮೋಡಗಳು ಕೋರ್ಕೊವಾಡೋದ ತುಟ್ಟ ತುದಿಯಲ್ಲಿ ಒಟ್ಟಾಗುತ್ತಿದ್ದುವು. ಹೀಗೆ ಮೋಡಗಳು ಅರೆಬರೆ ಮುಸುಕಿದಾಗ ಈ ಪರ್ವತವು 2300 ಅಡಿಯ ತನ್ನ ನಿಜವಾದ ಎತ್ತರಕ್ಕಿಂತಲೂ ಎತ್ತರವಾಗಿ ಕಾಣಿಸುತ್ತಿತ್ತು. ಹವಾಮಾನ ಕುರಿತು ಬರೆದ ಪ್ರಬಂಧಗಳಲ್ಲಿ ಮಿಸ್ಟರ್ ಡೇನಿಯೆಲ್ ಹೀಗೆ ಹೇಳಿದ್ದಾರೆ. ಕೆಲವೊಮ್ಮೆ ಮೋಡಗಳು ಪರ್ವತಗಳ ನೆತ್ತಿಯಲ್ಲಿ ತಟಸ್ಥವಾಗಿ ನಿಂತಂತೆ ಕಾಣುತ್ತವೆಯಾದರೂ, ಅವುಗಳ ಮೇಲೆ ಗಾಳಿ ಬೀಸುತ್ತಲೇ ಇರುತ್ತದೆ. ಇದೇ ವಿದ್ಯಮಾನವು ಇಲ್ಲ ಬೇರೊಂದು ಬಗೆಯ ನೋಟವನ್ನು ಸೃಷ್ಟಿಸಿತ್ತು. ಇಲ್ಲಿ ಮೋಡವು ಬಲು ವೇಗವಾಗಿ ಪರ್ವತದ ನೆತ್ತಿಯ ಮೇಲಿಂದ ಬಾಗಿ ಮರೆಯಾಗಿಬಿಡುತ್ತಿತ್ತಾದರೂ ಅದರ ಗಾತ್ರದಲ್ಲಿ ಹೆಚ್ಚು ಕಡಿಮೆ ಆಗುತ್ತಲೇ ಇರಲಿಲ್ಲ. ಸೂರ್ಯಾಸ್ತವಾಗುತ್ತಿತ್ತು. ದಕ್ಷಿಣದಿಂದ ಬೀಸಿ ಬಂದ ಮೆಲುಗಾಳಿ ಪರ್ವತದ ದಕ್ಷಿಣ ಮುಖಕ್ಕೆ ಬಡಿದ ನಂತರ ಮೇಲ್ಭಾಗದಲ್ಲಿದ್ದ ಶೀತಲ ಮಾರುತದ ಜೊತೆಗೆ ಬೆರೆತು ಹೋಗುತ್ತಿತ್ತು. ಹೀಗೆ ಗಾಳಿಯಲ್ಲಿದ್ದ ತೇವಾಂಶವು ಘನಿಸುತ್ತಿತ್ತು. ಈ ಹಗುರವಾದ ಮೋಡದ ಗುಚ್ಛಗಳು ಪರ್ವತದ ಅಂಚನ್ನು ದಾಟುತ್ತಿದ್ದಂತೆಯೇ, ಉತ್ತರ ಭಾಗದಲ್ಲಿದ್ದ ಇಳಿಜಾರಿನಲ್ಲಿ ಮೇಲೇರುತ್ತಿದ್ದ ಬಿಸಿ ಗಾಳಿಯ ಪ್ರಭಾವಕ್ಕೆ ಸಿಲುಕಿ, ಆ ತಕ್ಷಣವೇ ಕರಗಿಯೂ ಹೋಗುತ್ತಿದ್ದುವು.

ಛಳಿಗಾಲದ ಆರಂಭದಲ್ಲಿ ಅಂದರೆ ಮೇ-ಜೂನ್ ತಿಂಗಳಲ್ಲಿ ಇಲ್ಲಿನ ಹವೆ ಸಂತಸದಾಯಕವಾಗಿತ್ತು. ಬೆಳಗ್ಗೆ ಹಾಗು ರಾತ್ರಿ ಒಂಭತ್ತು ಗಂಟೆಗೆ ಅಳೆದಾಗ ಇಲ್ಲಿನ ಸರಾಸರಿ ತಾಪಮಾನ ಕೇವಲ 72 ಡಿಗ್ರೀ ಫ್ಯಾರನ್ ಹೈಟ್ ಗಳಷ್ಟೆ ಇದ್ದುವು. ಆಗಾಗ್ಗೆ ಭಾರೀ ಮಳೆಯೂ ಸುರಿಯುತ್ತಿತ್ತು. ಆದರೆ ದಕ್ಷಿಣದಿಂದ ಬೀಸಿದ  ಒಣಗಾಳಿ ಬಲು ಬೇಗನೆ ಎಲ್ಲವನ್ನೂ ಒಣಗಿಸಿಬಿಡುತ್ತಿದ್ದುದರಿಂದ, ಓಡಾಡಲು ಹಿತಕರವಾಗಿರುತ್ತಿತ್ತು. ಒಂದು ದಿನ ಕೇವಲ ಆರುಗಂಟೆಗಳ ಅವಧಿಯೊಳಗೆ 1.6 ಅಂಗುಲದಷ್ಟು ಮಳೆ ಸುರಿಯಿತು!  ಈ ಚಂಡಮಾರುತವು ಕೋರ್ಕೊವಾಡೊವನ್ನು ಸುತ್ತುವರೆದ ಕಾಡುಗಳನ್ನು ಹಾದು ಹೋಗುತ್ತಿದ್ದಾಗ ಮರಗಳ ಎಲೆಗಳ ಮೇಲೆ ಬೀಳುತ್ತಿದ್ದ ಹನಿಗಳ ಟಪಟಪ ಸದ್ದು ಸಾಕಷ್ಟು ಜೋರಾಗಿಯೇ ಇತ್ತು. ಯಾವುದೋ ತೊರೆ ರಭಸವಾಗಿ ಹರಿಯುತ್ತಿದೆಯೇನೋ ಎನ್ನುವಂತೆ ಇದು ಸುಮಾರು ಕಾಲು ಮೈಲಿಗಳ ದೂರದವರೆಗೂ ಕೇಳಿಸುತ್ತಿತ್ತು. ಬೇಗೆಯ ದಿನಗಳ ನಂತರ ಹೀಗೆ ನಿಶ್ಶಬ್ದವಾದ ಉದ್ಯಾನದಲ್ಲಿ ಕುಳಿತು ಸಂಜೆ ಕತ್ತಲಾಗುವುದನ್ನು ನೋಡುವುದು ಹಿತವಾಗಿತ್ತು. ಇಲ್ಲಿ ಪ್ರಕೃತಿಯು ಯುರೋಪಿನಲ್ಲಿರುವ ಸಂಗೀತಗಾರರಿಗಿಂತಲೂ ಸರಳವಾದವರನ್ನು ಆಯ್ದುಕೊಂಡಿದೆ ಎನಿಸುತ್ತಿತ್ತು. ಹೈಲಾ ಕುಲಕ್ಕೆ ಸೇರಿದ ಪುಟ್ಟ ಕಪ್ಪೆ ನೀರಿನ ಮೇಲೆ ಒಂದಂಗುಲ ದೂರದಲ್ಲಿರುವ ಹುಲ್ಲಿನೆಲೆಯನ್ನು ಆತುಕೊಂಡು ಹಿತವಾಗಿ ಗುಟುರು ಹಾಕುತ್ತಿತ್ತು. ನಾಲ್ಕೈದು ಒಟ್ಟಿಗಿದ್ದಾಗ ಬೇರೆ, ಬೇರೆ ಶೃತಿಯಲ್ಲಿ ಅವು ಹಿಮ್ಮೇಳವನ್ನು ನಡೆಸುತ್ತಿದ್ದುವು. ಈ ಕಪ್ಪೆಯನ್ನು ಹಿಡಿಯುವುದು ತುಸು ಕಷ್ಟವೇ. ಹೈಲಾ ಕಪ್ಪೆಯ ಕಾಲ್ಬೆರಳುಗಳ ತುದಿಯಲ್ಲಿ ಪುಟ್ಟ ಸಕರ್ (ಅಂದರೆ ಅಂಟುಪಾದಗಳು) ಇರುತ್ತವೆ. ಇವುಗಳ ನೆರವಿನಿಂದ ಇದು ನೆಟ್ಟಗೆ ಇಟ್ಟ ಗಾಜಿನ ಹಾಳೆಗಳ ಮೇಲೂ ಹತ್ತಬಲ್ಲುದು. ಹಲವಾರು ಬಗೆಯ ಜೀರುಂಡೆಗಳು ಹಾಗೂ ಮಿಡತೆಗಳು ಉಚ್ಚಸ್ಥಾಯಿಯಲ್ಲಿ ಎಡೆಬಿಡದೆ ಅರಚುತ್ತಿರುತ್ತವೆ. ದೂರದಿಂದ ತುಸು ಮೃದುವಾಗಿ ಕೇಳಿಸುವ ಇವು ಕೂಡ ಹಿತಕರವೇ. ಪ್ರತಿ ದಿನವೂ ಸಂಜೆಗತ್ತಲು ಮುಸುಕಿದಂತೆ ಈ ಸಂಗೀತ ಗೋಷ್ಠಿ ನಡೆಯುತ್ತಿತ್ತು. ನಾನು ಬಹಳಷ್ಟು ದಿನಗಳು, ಬೇರಾವುದಾದರೂ ಕೀಟವು ಹಾರಿ ಬಂದು ನನ್ನ ಗಮನ ಸೆಳೆಯದಿದ್ದರೆ, ಇದನ್ನೇ ಆಲಿಸುತ್ತಾ ಕುಳಿತಿರುತ್ತಿದ್ದೆ.

 

After the hotter days, it was delicious to sit quietly in the garden and watch the evening pass into night. Nature, in these climes, chooses her vocalists from more humble performers than in Europe. A small frog, of the genus Hyla, sits on a blade of grass about an inch above the surface of the water, and sends forth a pleasing chirp: when several are together they sing in harmony on different notes. I had some difficulty in catching a specimen of this frog. The genus Hyla has its toes terminated by small suckers; and I found this animal could crawl up a pane of glass, when placed absolutely perpendicular. Various cicadae and crickets, at the same time, keep up a ceaseless shrill cry, but which, softened by the distance, is not unpleasant. Every evening after dark this great concert commenced; and often have I sat listening to it, until my attention has been drawn away by some curious passing insect.

 

 

I found no less than twelve different species of terrestrial Planariae in different parts of the southern hemisphere.1 Some specimens which I obtained at Van Dieman’s Land, I kept alive for nearly two months, feeding them on rotten wood. Having cut one of them transversely into two nearly equal parts, in the course of a fortnight both had the shape of perfect animals. I had, however, so divided the body, that one of the halves contained both the inferior orifices, and the other, in consequence, none. In the course of twenty-five days from the operation, the more perfect half could not have been distinguished from any other specimen. The other had increased much in size; and towards its posterior end, a clear space was formed in the parenchymatous mass, in which a rudimentary cup-shaped mouth could clearly be distinguished; on the under surface, however, no corresponding slit was yet open. If the increased heat of the weather, as we approached the equator, had not destroyed all the individuals, there can be no doubt that this last step would have completed its structure. Although so well known an experiment, it was interesting to watch the gradual production of every essential organ, out of the simple extremity of another animal. It is extremely difficult to preserve these Planariae; as soon as the cessation of life allows the ordinary laws of change to act, their entire bodies become soft and fluid, with a rapidity which I have never seen equalled.

I first visited the forest in which these Planariae were found, in company with an old Portuguese priest who took me out to hunt with him. The sport consisted in turning into the cover a few dogs, and then patiently waiting to fire at any animal which might appear. We were accompanied by the son of a neighbouring farmer—a good specimen of a wild Brazilian youth. He was dressed in a tattered old shirt and trousers, and had his head uncovered: he carried an old-fashioned gun and a large knife. The habit of carrying the knife is universal; and in traversing a thick wood it is almost necessary, on account of the creeping plants. The frequent occurrence of murder may be partly attributed to this habit. The Brazilians are so dexterous with the knife that they can throw it to some distance with precision, and with sufficient force to cause a fatal wound.

I have seen a number of little boys practising this art as a game of play, and from their skill in hitting an upright stick, they promised well for more earnest attempts. My companion, the day before, had shot two large bearded monkeys. These animals have prehensile tails, the extremity of which, even after death, can support the whole weight of the body. One of them thus remained fast to a branch, and it was necessary to cut down a large tree to procure it. This was soon effected, and down came tree and monkey with an awful crash. Our day’s sport, besides the monkey, was confined to sundry small green parrots and a few toucans.

I profited, however, by my acquaintance with the Portuguese padre, for on another occasion he gave me a fine specimen of the Yagouaroundi cat. Every one has heard of the beauty of the scenery near Botofogo. The house in which I lived was seated close beneath the well-known mountain of the Corcovado. It has been remarked, with much truth, that abruptly conical hills are characteristic of the formation which Humboldt designates as gneiss-granite. Nothing can be more striking than the effect of these huge rounded masses of naked rock rising out of the most luxuriant vegetation.

I was often interested by watching the clouds, which, rolling in from seaward, formed a bank just beneath the highest point of the Corcovado. This mountain, like most others, when thus partly veiled, appeared to rise to a far prouder elevation than its real height of 2300 feet. Mr. Daniell has observed, in his meteorological essays, that a cloud sometimes appears fixed on a mountain summit, while the wind continues to blow over it.

The same phenomenon here presented a slightly different appearance. In this case the cloud was clearly seen to curl over, and rapidly pass by the summit, and yet was neither diminished nor increased in size. The sun was setting, and a gentle southerly breeze, striking against the southern side of the rock, mingled its current with the colder air above; and the vapour was thus condensed: but as the light wreaths of cloud passed over the ridge, and came within the influence of the warmer atmosphere of the northern sloping bank, they were immediately redissolved.

The climate, during the months of May and June, or the beginning of winter, was delightful. The mean temperature, from observations taken at nine o’clock, both morning and evening, was only 72°. It often rained heavily, but the drying southerly winds soon again rendered the walks pleasant. One morning, in the course of six hours, 1.6 inches of rain fell. As this storm passed over the forests which surround the Corcovado, the sound produced by the drops pattering on the countless multitude of leaves was very remarkable, it could be heard at the distance of a quarter of a mile, and was like the rushing of a great body of water.

 

 

 

 

 

ಇರುವೆಗಳು ಮತ್ತು ಅಣಬೆ

ಬೆಂಗಳೂರಿನಲ್ಲಿರುವ ನ್ಯಾಶನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸಿನಲ್ಲಿ ಸಂಶೋಧಕಿಯಾಗಿರುವ ಕನ್ನಡತಿ ಜಿ.ಟಿ. ಗೀತ ತಾವು ಕೈಗೊಂಡಿರುವ ಸಂಶೋಧನೆಗಳ ಕುರಿತು ಸುಂದರ ಚಿತ್ರ ಹಾಗೂ ಬರಹಗಳನ್ನು ರಚಿಸಿದ್ದಾರೆ. ಕನ್ನಡ ಮತ್ತು ಇಂಗ್ಲೀಷು ಎರಡರಲ್ಲೂ ವಿವರಿಸುವುದರ ಜೊತೆಗೆ ತಾವೇ ಚಿತ್ರಗಳನ್ನೂ ರಚಿಸುತ್ತಾರೆ. ಇದೋ ಇರುವೆಗಳ ಬಗ್ಗೆ ಈ ವಿಜ್ಞಾನಿಯ ಬರೆಹ ಇಲ್ಲಿದೆ.

https://nice.ncbs.res.in/2018/10/17/volitant-mushroom-farmers-%e0%b2%89%e0%b2%b3%e0%b3%81%e0%b2%b5-%e0%b2%af%e0%b3%8b%e0%b2%97%e0%b2%bf%e0%b2%af-%e0%b2%87%e0%b2%b0%e0%b3%81%e0%b2%b5%e0%b3%86-%e0%b2%a8%e0%b3%8b%e0%b2%a1%e0%b2%bf/amp/#click=https://t.co/PvVw8bZin5

ಐಸಾಕ್ ನ್ಯೂಟನ್

ಐಸಾಕ್ ನ್ಯೂಟನ್ ಹೆಸರು ಯಾರಿಗೆ ಗೊತ್ತಿಲ್ಲ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎನ್ನುವಂತೆಯೇ ಪ್ರತಿ ಬಲಕ್ಕೂ ವಿರುದ್ಧವಾದ ಮತ್ತೊಂದು ಬಲ ಇದ್ದೇ ಇರಬೇಕು ಎಂಬ ನಿಯಮ ನಿಸರ್ಗದಲ್ಲಿ ಇದೆ ಎಂದು ನಿರೂಪಿಸಿದ ವಿಜ್ಞಾನಿ ಐಸಾಕ್ ನ್ಯೂಟನ್. ಈತ ತಿಳಿಸಿಕೊಟ್ಟ ಮೂರು ನಿಯಮಗಳೇ ಇಂದಿನ ಫಿಸಿಕ್ಸ್‍ಗೆ ತಳಹದಿ ಎನ್ನಬಹುದು. ಈ ವಿಶ್ವ ಈವರೆಗೆ ಕಂಡಿರುವ ಮಹಾತಿಮಹ ಫಿಸಿಕ್ಸ್ ಪ್ರತಿಭೆಗಳಲ್ಲಿ ನ್ಯೂಟನ್ನನನ್ನು ಮೊದಲ ಸ್ಥಾನದಲ್ಲಿ ಇರಿಸುತ್ತಾರೆ. ಏಕೆಂದರೆ ಪರಮಾಣುವಿನ ಬಗ್ಗೆ ನಮಗೆ ಇರುವ ತಿಳುವಳಿಕೆ ಇರಬಹುದು, ನಿತ್ಯವೂ ನಾವು ಬಳಸುವ ವಾಹನಗಳನ್ನು ಚಾಲಿಸುವ ಇಂಜಿನ್ ಇರಬಹುದು, ಗ್ರಹಗಳ ಚಲನೆ ಇರಬಹುದು, ಬೃಹತ್ ಕಟ್ಟಡದ ನಿರ್ಮಾಣವಿರಬಹುದು ಅಥವಾ ಶುಕ್ರಗ್ರಹಕ್ಕೆ ಹೋಗಬೇಕೆನ್ನುವ ಮಹದಾಸೆ ಇರಬಹುದು. ಇವೆಲ್ಲವೂ ಸಾಧ್ಯವಾಗಬೇಕಾದರೆ ಒಂದಲ್ಲ ಒಂದು ಹಂತದಲ್ಲಿ ನ್ಯೂಟನ್ನನ ನಿಯಮಗಳನ್ನು ಬಳಸಿಯೇ ಇರುತ್ತೇವೆ. ಅಷ್ಟೊಂದು ಮಹತ್ವ ಇವರ ಸಂಶೋಧನೆಗಳಿಗೆ ಇವೆ. ಶÀಕ್ತಿಯ ಹೊರತಾಗಿ ಫಿಸಿಕ್ಸ್‍ನಲ್ಲಿ ಬರುವ ಇತರೆ ಎಲ್ಲ ವಿಷಯಗಳ ಬಗ್ಗೆಯೂ ನಾಲ್ಕು ನೂರು ವರ್ಷಗಳ ಹಿಂದೆಯೇ ನ್ಯೂಟನ್ ಅಧ್ಯಯನ ನಡೆಸಿದ್ದಿದೆ. ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳೇಕೆ? ಬೆಳಕು ಎಂದರೇನು ಎನ್ನುವ ಬಗ್ಗೆಯೂ ನ್ಯೂಟನ್‍ನ ಶೋಧಗಳು ಬೆಳಕು ಚೆಲ್ಲಿದುವು. ಮತ್ತೊಂದೆಡೆ ಗಣಿತದ ಅವಿಭಾಜ್ಯ ಅಂಗ ಎನ್ನಿಸಿರುವ ಕ್ಯಾಲ್ಕುಲಸ್ ಎನ್ನುವ ಗಣಿತ ಶಾಖೆಯನ್ನು ಆರಂಭಿಸಿದ್ದೂ ನ್ಯೂಟನ್ನೇ. ಇವೆಲ್ಲವುಗಳ ಫಲವಾಗಿ ನ್ಯೂಟನ್ನನನ್ನು ಇಂದಿನ ಫಿಸಿಕ್ಸ್‍ನ ಜನಕ ಎಂದೂ ಕೆಲವರು ಹೇಳುತ್ತಾರೆ. ಇವೆಲ್ಲವನ್ನೂ ಕೇಳಿದಾಗ ನ್ಯೂಟನ್ ಎಂಥ ಜೀನಿಯಸ್ ಎಂದುಕೊಳ್ಳುತ್ತೇವೆ.

ಜಗತ್ತು ಈವತ್ತು ನ್ಯುಟನ್ನನಿಗೆ ನೀಡುವ ಗೌರವ ಸುಲಭವಾಗಿ ದಕ್ಕಿದ್ದಲ್ಲ. ನ್ಯೂಟನ್ ಮಹಾ ಪ್ರತಿಭೆಯೇನೋ ನಿಜ. ಆದರೆ ಅದನ್ನು, ಜಗತ್ತಿಗೆ ಮನವರಿಕೆ ಮಾಡಿಕೊಡಬೇಕಾದರೆ ಆತ ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನ್ಯೂಟನ್‍ಗೆ ತಾಯಿಯ ಆರೈಕೆಯೂ ದೊರೆಯಲಿಲ್ಲ. ನ್ಯೂಟನ್ ಮೂರು ವರ್ಷದವನಾಗಿದ್ದಾಗಲೆ ಆತನ ತಾಯಿ ಬೇರೊಬ್ಬನನ್ನು ಮದುವೆಯಾಗಿ ದೂರ ಹೋಗಿದ್ದಳು. ತದನಂತರ ಅಜ್ಜಿಯ ಆಸರೆಯಲ್ಲಿ ಬೆಳೆದ ನ್ಯೂಟನ್ ತನ್ನ ವಿದ್ಯಾಭ್ಯಾಸವನ್ನು ಪೂರೈಸಲು ಶ್ರೀಮಂತ ವಿದ್ಯಾರ್ಥಿಗಳ ಸೇವೆ ಮಾಡಿಕೊಂಡು ಸಂಪಾದಿಸಬೇಕಿತ್ತು. ಇಷ್ಟೆಲ್ಲ ತೊಂದರೆಗಳ ನಡುವೆಯೂ ವಿದ್ಯಾಭ್ಯಾಸ ಪೂರೈಸಿದ ನ್ಯೂಟನ್ ತನ್ನ ಹೊಸ ವಿಚಾರಗಳನ್ನು ಮಂಡಿಸಿದಾಗ ತಕ್ಷಣಕ್ಕೆ ದೊರಕಿದ್ದು ಗೌರವ ಅಲ್ಲ. ಆಗಿನ ಮತ್ತೊಬ್ಬ ಪ್ರತಿಷ್ಠಿತ ವಿಜ್ಞಾನಿ ರಾಬರ್ಟ್ ಹುಕ್ ನ್ಯೂಟನ್ನನ ವಿಚಾರಗಳನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು.  ಇವೆಲ್ಲ ವಿರೋಧಗಳನ್ನೂ ಮೆಟ್ಟಿ ನಿಲ್ಲಬೇಕಾದರೆ ನ್ಯೂಟನ್ ಹತ್ತಾರು ವರ್ಷಗಳ ಕಾಲ ಏಕಚಿತ್ತನಾಗಿ ಅಧ್ಯಯನ ಮಾಡಿ ಎಲ್ಲರೂ ಮೆಚ್ಚುವಂಥ ನಿಯಮಗಳನ್ನು ರೂಪಿಸಿದರು.  ‘ಸಾಗರ ತೀರದಲ್ಲಿ ಕಲ್ಲು ಹುಡುಕುವ ಬಾಲಕ ತಾನು. ಎದುರಿಗೆ ಅಪಾರ ಜ್ಞಾನ ಸಾಗರ ಇದ್ದರೂ ಅಲ್ಲೊಂದು, ಇಲ್ಲೊಂದು ಕಲ್ಲು ಹೆಕ್ಕಿದ್ದೇನೆ. ಅವು ತುಸು ಹೊಳಪಿನದಿರಬಹುದು ಅಷ್ಟೆ,’ ಎಂದು ನ್ಯೂಟನ್ ತನ್ನ ಬಗ್ಗೆ ಹೇಳಿಕೊಂಡಿದ್ದಾರೆ.

ನ್ಯೂಟನ್ನನ ಬದುಕು ಕಲಿಸುವ ಮತ್ತೊಂದು ಪಾಠವಿದೆ. ಬದುಕಿದ್ದಾಗಲೇ ತನ್ನ ವಿಚಾರಗಳಿಗಾಗಿ ನ್ಯುಟನ್ ವಿಶ್ವ ಪ್ರಸಿದ್ಧಿ ಗಳಿಸಿದ್ದರು. ಇಂದಿಗೂ ನ್ಯೂಟನನ್ನ ತತ್ವಗಳನ್ನು ಪ್ರಾಥಮಿಕ ನೈಸರ್ಗಿಕ ನಿಯಮಗಳೆಂದು ಭಾವಿಸಲಾಗಿದೆ. ನ್ಯೂಟನ್ನನ ವಿಚಾರಗಳು ವಿಜ್ಞಾನ ಜಗತ್ತಿನ ದಿಶೆಯನ್ನೇ ಬದಲಿಸಿದುವು ಅನ್ನುವುದರಲ್ಲಿ ಅಚ್ಚರಿ ಇಲ್ಲ. ಆದರೆ ನ್ಯೂಟನ್ ಕಂಡದ್ದೇ ಕೊನೆ ಅಂತಲೂ ಇಲ್ಲ. ಏಕೆಂದರೆ ನ್ಯೂಟನ್‍ನ ಅನಂತರ ಫಿಸಿಕ್ಸ್‍ನಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಹೊಸ ವಿಚಾರಗಳು ಮೂಡಿವೆ. ನಾವು ಹೇಗೆ ಶಾಶ್ವತವಲ್ಲವೋ, ನಮ್ಮ ಕೆಲಸ, ಕೀರ್ತಿಗಳೂ ಶಾಶ್ವತವಲ್ಲ ಎನ್ನುವುದನ್ನು ನೆನಪಿಡೋಣ.

ನ್ಯೂಟನ್ ವಿಜ್ಞಾನಿಯಷ್ಟೆ ಅಲ್ಲ. ರಾಜಕೀಯ ವ್ಯಕ್ತಿಯೂ ಹೌದು. ಆತ ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಚುನಾ¬.ುತ ಸದಸ್ಯನಾಗಿಯೂ ಇದ್ದರು. ಇವೆಲ್ಲದರ ಜೊತೆಗೆ ಬ್ರಿಟನ್ನಿನ ಟಂಕಸಾಲೆಯ ನಿರ್ದೇಶಕನಾಗಿಯೂ ಆತ ಕೆಲಸ ಮಾಡಿದ್ದರು. ಇವೆಲ್ಲವೂ ಪ್ರಭಾವಶಾಲಿ ಹುದ್ದೆಗಳೇ ಆಗಿದ್ದರೂ ಜನ ಆತನನ್ನು ನೆನಪಿಸಿಕೊಳ್ಳುವುದು ಫಿಸಿಕ್ಸ್ ನಿಯಮಗಳಿಂದಾಗಿಯಷ್ಟೆ ಎನ್ನುವುದನ್ನು ನಾವು ಗಮನಿಸಬೇಕು. ನಮ್ಮ ಬದುಕಿನಲ್ಲಿ ನಾವು ಏನೆಲ್ಲ ಆಗಿರಬಹುದು. ಆದರೆ ಜನಮನದಲ್ಲಿ ನಾವು ಉಳಿಯುವುದು ಯಾವುದೋ ಒಂದೋ ಎರಡೋ ವಿಚಾರಗಳ ನೆನಪಾಗಿಯಷ್ಟೆ. ಅವನ ಹುದ್ದೆ, ಸಾಮಾಜಿಕ ಸ್ಥಾನಮಾನಗಳಿಗಿಂತಲೂ ಸಮಾಜ ಅವನ ಫಿಸಿಕ್ಸ್ ನಿಯಮಗಳನ್ನಷ್ಟೆ ಇನ್ನೂ ನೆನಪಿಸಿಕೊಳ್ಳುತ್ತಿದೆ. ನಾವು ಎಷ್ಟೇ ಸಂಪತ್ತು, ಕೀರ್ತಿ ಗಳಿಸಿದ್ದರೂ ಜನಮನದಲ್ಲಿ ಉಳಿಯುವುದು ನಾವು ಮಾಡಿದ ಒಳ್ಳೆಯ ಕೆಲಸಗಳಷ್ಟೆ!

_____________

ಆರು ವರ್ಷದ ಹಿಂದೆ ಬರೆದಿದ್ದ ಒಂದು ಪುಟ್ಟ ಲೇಖನ. ಇದು ಆಕಾಶವಾಣಿಯ ಚಿಂತನ ಕಾರ್ಯಕ್ರಮದಲ್ಲಿ ಹಲವು ಬಾರಿ ಪ್ರಸಾರವಾಗಿದೆ. ಲೇಖನ ಬರೆದಾಗಲಾಗಲಿ, ಅದು ರೇಡಿಯೋದಲ್ಲಿ ಪ್ರಸಾರವಾದಾಗಲಾಗಲಿ ಅದನ್ನು ನಾನು ಗಮನಿಸಿರಲಿಲ್ಲ. ಈಗ ಗಮನಿಸಿದೆ. ಯಾಕೋ ಇಷ್ಟವಾಯಿತು. ಅದಕ್ಕೆ ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.

ಬೀಗಲ್ ಯಾನ -14

ಏಪ್ರಿಲ್ 18, 1832 – ಹಿಂದೆ ಮರಳುವಾಗ ನಾವು ಸೋಚೆಗೋದಲ್ಲಿ ಕಳೆದ ಎರಡು ದಿನಗಳನ್ನು ಕಾಡಿನಿಂದ ಕೀಟಗಳನ್ನು ಹೆಕ್ಕಲು ಬಳಸಿಕೊಂಡೆ. ಅಷ್ಟೊಂದು ಎತ್ತರವಾಗಿದ್ದರೂ ಅಲ್ಲಿನ ಬಹುತೇಕ ಮರಗಳ ಸುತ್ತಳತೆ ಮೂರರಿಂದ ನಾಲ್ಕು ಅಡಿಗಿಂತ ಹೆಚ್ಚಿರಲಿಲ್ಲ. ನಿಜ. ಕೆಲವು ಇನ್ನೂ ದೊಡ್ಡ ಗಾತ್ರದವೂ ಇದ್ದುವು. ಶ್ರೀ ಮ್ಯಾನ್ಯುವೆಲ್ ಸುಮಾರು 70 ಅಡಿ ಉದ್ದವಿದ್ದ ಗಟ್ಟಿ ಮರದ ಬೊಡ್ಡೆಯಿಂದ ದೋಣಿಯನ್ನು ಮಾಡುತ್ತಿದ್ದ. ಅದರ ಉದ್ದ ಮೊದಲು 110 ಅಡಿಯೂ ಬಲು ದಪ್ಪವೂ ಇತ್ತಂತೆ. ರೆಂಬೆ ಕೊಂಬೆಗಳಿರುವ ಮರಗಳ ಜೊತೆ ವೈದೃಶ್ಯವಾಗಿ ತಾಳೆ ಜಾತಿಯ ಮರಗಳು ಇದ್ದುದು ಅಲ್ಲಿನ ಕಾಡಿಗೆ ಸಮಶೀತೋಷ್ಣ ವಲಯದ ಕಾಡುಗಳ ಲಕ್ಷಣ ನೀಡಿತ್ತು. ತಾಳೆ ಜಾತಿಯ ಮರಗಳಲ್ಲಿ ಸುಂದರವೆನ್ನಿಸಿದ ಕ್ಯಾಬೇಜ್ ಪಾಮ್ ಇಲ್ಲಿನ ಕಾಡುಗಳಿಗೆ ಅಲಂಕಾರಪ್ರಾಯವಾಗಿತ್ತು. ಎರಡೂ ಕೈಗಳಿಂದ ಹಿಡಿದಿಡಬಹುದಾದಷ್ಟು ತೆಳ್ಳಗಿನ ಕಾಂಡವಿರುವ ಈ ಗಿಡದ ಮನೋಹರವಾದ ಶಿರ ನೆಲದಿಂದ ಸುಮಾರು ನಲವತ್ತು-ಐವತ್ತು ಅಡಿಗಳಿಗೂ ಎತ್ತರದಲ್ಲಿ ಓಲಾಡುತ್ತಿರುತ್ತದೆ. ಮರದಂತಹ ಗಟ್ಟಿಯಾದ ಬಳ್ಳಿಗಳು, ಬೇರೆ ಬಳ್ಳಿಗಳ ಜೊತೆಗೆ ತಳುಕಿಕೊಂಡು ಸಾಕಷ್ಟು ದಪ್ಪವಾಗಿದ್ದುವು. ಕೆಲವದರ ಸುತ್ತಳತೆಯಂತೂ ಎರಡಡಿಯನ್ನೂ ಮೀರಿತ್ತು. ಕೆಲವು ಹಳೆಯ ಮರಗಳ ಕೊಂಬೆಗಳಿಂದ ಜೋತು ಬಿದ್ದ ಲಯಾನ ಬಳ್ಳಿಗಳು ಹುಲ್ಲಿನ ಕಂತೆಗಳಂತೆ ವಿಚಿತ್ರ ನೋಟವನ್ನು ನೀಡಿದುವು. ಮೇಲಿನಿಂದ ಕಣ್ತೆಗೆದು ನೆಲದ ಕಡೆ ಹರಿಸಿದರೋ ಅಲ್ಲಿ ಹರಡಿಕೊಂಡಿದ್ದ ಅತಿ ಸುಂದರವಾದ ಜರೀಗಿಡಗಳು ಹಾಗೂ ಮುಟ್ಟಿದರೆ ಮುನಿಯ ಎಲೆಗಳು ಕಣ್ಣನ್ನು ಸೆಳೆಯುತ್ತಿದ್ದುವು. ಕೆಲವೆಡೆ ಮುಟ್ಟಿದರೆ ಮುನಿ ಗಿಡಗಳು ಹಲವು ಅಂಗುಲ ದಪ್ಪದ ಪೊದೆಗಳನ್ನೇ ಸೃಷ್ಟಿಸಿದ್ದುವು. ಇವುಗಳ ದಪ್ಪಹಾಸಿನ ಮೇಲೆ ನಡೆದಾಗ, ಅವುಗಳ ಎಲೆಗಳು ಮುದುಡಿಕೊಂಡದ್ದರಿಂದ ಬಣ್ಣ ಬದಲಿಸಿದಂತಾಗಿ ನಾವು ನಡೆದ ಹಾದಿ ತೋರುತ್ತಿತ್ತು.  ಅಲ್ಲಿದ್ದ ವಸ್ತುಗಳಲ್ಲಿ ಪ್ರತ್ಯೇಕವಾಗಿ ಕೆಲವದರ ಸೌಂದರ್ಯವನ್ನು ವರ್ಣಿಸುವುದು ಸುಲಭವಾದರೂ ಅಲ್ಲಿನ ದೃಶ್ಯ ಕಂಡಾಗ ಮನಸ್ಸನ್ನು ಆವರಿಸುವ ಬೆರಗು, ಅಚ್ಚರಿ, ಮೋಹ ಮುಂತಾದ ಉನ್ನತ ಭಾವಗಳ ಕಲ್ಪನೆಯನ್ನು ಸರಿಯಾಗಿ ನೀಡುವುದು ಅಸಾಧ್ಯವೇ!

cabbagepalm
ಕ್ಯಾಬೇಜ್ ಪಾಮ್

ಏಪ್ರಿಲ್ 19, 1832 – ಸೋಚೆಗೊವನ್ನು ಬಿಟ್ಟು ಹೊರಟ ನಾವು ಬಂದ ಹಾದಿಯಲ್ಲೇ ಹೆಜ್ಜೆಯಿಟ್ಟೆವು. ಅದು ಬಹಳ ಆಯಾಸಕರವಾಗಿತ್ತು. ಏಕೆಂದರೆ ಆ ಹಾದಿಯು ಸಮುದ್ರ ತೀರದ ಪಕ್ಕದಲ್ಲೇ ಇದ್ದ ಕಣ್ಣು ಕೋರೈಸುತ್ತಿದ್ದ ಬಿಸಿ ಮರಳಿನ ಬಯಲಿನಲ್ಲಿ ಅಡ್ಡಾದಿಡ್ಡಿ ಸಾಗಿತ್ತು. ಕುದುರೆಯು  ಆ ನಯವಾದ ಉಸುಕಿನ ಮೇಲೆ ಪ್ರತಿಬಾರಿ ಕಾಲಿಟ್ಟಾಗಲೂ, ಕೀಚ್ ಎನ್ನುವ ಸದ್ದು ಕೇಳಿಸುತ್ತಿದ್ದುದನ್ನು ಗಮನಿಸಿದೆ. ಮೂರನೆಯ ದಿನ ನಾವು ಬೇರೊಂದು ದಿಕ್ಕು ಹಿಡಿದು ಪುಟ್ಟ ಮಾದ್ರೆ ದೆ ದೆಯೋಸ್ ಹಳ್ಳಿಯೊಳಗಿಂದ ಸಾಗಿದೆ. ಇದು ಬ್ರೆಜಿಲ್ಲಿನ ಪ್ರಮುಖವಾದ ಹೆದ್ದಾರಿಯಾಗಿದ್ದರೂ ಎಷ್ಟು ಕೆಟ್ಟದಾಗಿತ್ತೆಂದರೆ ಎತ್ತಿನ ಗಾಡಿಯ ಹೊರತಾಗಿ ಇನ್ಯಾವ ಗಾಲಿಯ ವಾಹನವೂ ಅಲ್ಲಿ ಸಾಗಲಾಗುತ್ತಿರಲಿಲ್ಲ. ನಮ್ಮ ಪಯಣದುದ್ದಕ್ಕೂ ಒಂದೇ ಒಂದು ಕಲ್ಲಿನ ಸೇತುವೆಯನ್ನೂ ನಾವು ದಾಟಲಿಲ್ಲ. ಜೊತೆಗೆ ಮರದಿಂದ ಮಾಡಿದ್ದ ಆ ಸೇತುವೆಗಳು ಎಷ್ಟು ದುರಸ್ತಿಯಲ್ಲಿದ್ದುವೆಂದರೆ ಅವನ್ನು ತಪ್ಪಿಸಿಕೊಂಡು ಒಂದು ಬದಿಯಿಂದ ಸಾಗಬೇಕಿತ್ತು. ಯಾವುದರ ದೂರವೂ ನಿಖರವಾಗಿ ತಿಳಿದಿರಲಿಲ್ಲ. ಮೈಲಿಗಲ್ಲುಗಳ ಬದಲಿಗೆ ರಸ್ತೆಯ ಬದಿಯಲ್ಲಿ ಅಡ್ಡಗೆರೆಗಳು ಇರುತ್ತಿದ್ದುವು. ಇವು ಅಲ್ಲಿ ಮನುಷ್ಯರು ರಕ್ತ ಸುರಿಸಿದ್ದ ಸೂಚಿಯಾಗಿದ್ದುವು. 23ನೆಯ ತಾರೀಖು ಸಂಜೆ ನಾವು ಈ ಪುಟ್ಟ ಪಯಣವನ್ನು ಮುಗಿಸಿ ರಿಯೊ ತಲುಪಿದೆವು.

ರಿಯೋದಲ್ಲಿ ನಾವು ಉಳಿದಿದ್ದಷ್ಟು ಕಾಲವೂ ನಾನು ಬೊಟೊಫೊಗೊ ಕೊಲ್ಲಿಯ ಬಳಿಯ ಕಾಟೇಜಿನಲ್ಲಿ ವಾಸವಿದ್ದೆ. ಈ ಅದ್ಭುತ ನಾಡಿನಲ್ಲಿ ಇದಕ್ಕಿಂತಲೂ ಖುಷಿಯಾದ ವಿಷಯ ಬಹುಶಃ ವರವಾಗಿ ಸಿಗಲಿಕ್ಕಿಲ್ಲ. ಇಂಗ್ಲೆಂಡಿನಲ್ಲಿ ಪ್ರಕೃತಿಯ ಬಗ್ಗೆ ಆಸಕ್ತಿ ಇರುವ ಯಾವೊಬ್ಬನಿಗೂ ಒಂದಿಷ್ಟು ದೂರ ನಡೆದರೆ ಏನಾದರೂ ಆಸಕ್ತಿಕರವಾದದ್ದು ಕಾಣಲು ಸಿಗುತ್ತದೆ. . ಆದರೆ ಜೀವಿಗಳಿಂದ ತುಂಬಿ ತುಳುಕುವ ಇಲ್ಲಿನ ಸಮೃದ್ಧ ಪರಿಸರದಲ್ಲಿ ಆತ ಒಂದು ಹೆಜ್ಜೆಯನ್ನೂ ಕದಲಿಸಲಾಗದಷ್ಟು. ಆಸಕ್ತಿಕರ ವಿಷಯಗಳು ಇವೆ.

mandiocaorcassava
ಮರಗೆಣಸು

ನಾನಿಲ್ಲಿ ಕಂಡು ದಾಖಲಿಸಿದ ಸಂಗತಿಗಳು ಬಹುತೇಕ ಅಕಶೇರುಕಗಳಿಗೆ ಸಂಬಂಧಿಸಿದವು. ಇಲ್ಲಿನ ಒಣ ಪ್ರದೇಶದಲ್ಲಿ ವಾಸವಿರುವ ಪ್ಲಾನೇರಿಯಾದ ವರ್ಗವೊಂದು ನನ್ನ ಆಸಕ್ತಿಯನ್ನು ಕೆರಳಿಸಿತು. ಈ ಪ್ರಾಣಿಗಳು ಎಷ್ಟು ಸರಳ ಜೀವಿಗಳೆಂದರೆ, ಇವು ಯಾವುದೇ ಪ್ರಾಣಿಯ ಕರುಳಲ್ಲಿ ಇವು ವಾಸಿಸದಿದ್ದರೂ ಕುವಿಯೆ ಇವನ್ನು ಕರುಳಜಂತುಗಳ ಜೊತೆಗೇ ವರ್ಗೀಕರಿಸಿದ್ದಾರೆ. ಇವುಗಳ ಅಸಂಖ್ಯ ಪ್ರಭೇದಗಳು ಸಿಹಿನೀರಿನಲ್ಲಿಯೂ, ಉಪ್ಪುನೀರಿನಲ್ಲಿಯೂ ವಾಸಿಸುತ್ತವೆ. ನಾನೀಗ ಹೇಳುತ್ತಿರುವುದು, ಕಾಡಿನ ಒಣ ಪ್ರದೇಶಗಳಲ್ಲಿಯೂ ಕಂಡಂಥವು. ಕೊಳೆತ ಮರಗಳ ಅಡಿಯಲ್ಲಿ ಇವನ್ನು ಕಂಡೆ. ಬಹುಶಃ ಅವನ್ನೇ ಇವು ತಿನ್ನುತ್ತಿರಬಹುದೆನ್ನುವುದು ನನ್ನ ಊಹೆ. ನೋಡಲು ಇವು ಸಾಮಾನ್ಯ ಗೊಂಡೆಹುಳು ಗಳಂತೆ (ಸ್ಲಗ್) ಕಾಣುತ್ತವೆಯಾದರೂ ಬಲು ತೆಳ್ಳನೆಯ ದೇಹವಿದೆ. ಕೆಲವು ಪ್ರಭೇದಗಳ ಮೈಮೇಲೆ ಸುಂದರವಾದ ಬಣ್ಣಬಣ್ಣದ ಪಟ್ಟೆಗಳಿರುತ್ತವೆ. ಇವುಗಳ ರಚನೆಯೂ ಬಲು ಸರಳ. ದೇಹದ ನಡುವಿನಲ್ಲಿ ತಳಭಾಗದಲ್ಲಿ ಅಥವಾ ಇವು ತೆವಳುವ ಭಾಗದಲ್ಲಿ ಎರಡು ಪುಟ್ಟ ಸೀಳುಗಳಿವೆ. ಮುಂಭಾಗದಲ್ಲಿರುವ ಸೀಳು ಆಲಿಕೆಯಾಕಾರವಿದ್ದು ಅದರೊಳಗಿಂದ ಮುಟ್ಟಿದರೆ ನಲುಗುವ ಬಾಯಿಯನ್ನು ಚಾಚುತ್ತದೆ. ಉಪ್ಪುನೀರಿನಿಂದಾಗಿಯೋ, ಇನ್ಯಾವುದೇ ಕಾರಣಕ್ಕೋ ಈ ಪ್ರಾಣಿ ಸತ್ತರೂ ಸಹ, ಈ ಭಾಗದಲ್ಲಿ ಮಾತ್ರ ಚೈತನ್ಯ ಉಳಿದಿರುತ್ತದೆ.

__________________________________________________

April 18th, 1832.—In returning we spent two days at Socêgo, and I employed them in collecting insects in the forest. The greater number of trees, although so lofty, are not more than three or four feet in circumference. There are, of course, a few of much greater dimension. Senhôr Manuel was then making a canoe 70 feet in length from a solid trunk, which had originally been 110 feet long, and of great thickness. The contrast of palm trees, growing amidst the common branching kinds, never fails to give the scene an intertropical character. Here the woods were ornamented by the Cabbage Palm—one of the most beautiful of its family. With a stem so narrow that it might be clasped with the two hands, it waves its elegant head at the height of forty or fifty feet above the ground. The woody creepers, themselves covered by other creepers, were of great thickness: some which I measured were two feet in circumference. Many of the older trees presented a very curious appearance from the tresses of a liana hanging from their boughs, and resembling bundles of hay. If the eye was turned from the world of foliage above, to the ground beneath, it was attracted by the extreme elegance of the leaves of the ferns and mimosæ. The latter, in some parts, covered the surface with a brushwood only a few inches high. In walking across these thick beds of mimosæ, a broad track was marked by the change of shade, produced by the drooping of their sensitive petioles. It is easy to specify the individual objects of admiration in these grand scenes; but it is not possible to give an adequate idea of the higher feelings of wonder, astonishment, and devotion, which fill and elevate the mind.

April 19th, 1832.—Leaving Socêgo, during the two first days we retraced our steps. It was very wearisome work, as the road generally ran across a glaring hot sandy plain, not far from the coast. I noticed that each time the horse put its foot on the fine siliceous sand, a gentle chirping noise was produced. On the third day we took a different line, and passed through the gay little village of Madre de Deôs. This is one of the principal lines of road in Brazil; yet it was in so bad a state that no wheel vehicle, excepting the clumsy bullock-wagon, could pass along. In our whole journey we did not cross a single bridge built of stone; and those made of logs of wood were frequently so much out of repair that it was necessary to go on one side to avoid them. All distances are inaccurately known. The road is often marked by crosses, in the place of milestones, to signify where human blood has been spilled. On the evening of the 23rd we arrived at Rio, having finished our pleasant little excursion.

During the remainder of my stay at Rio, I resided in a cottage at Botofogo Bay. It was impossible to wish for anything more delightful than thus to spend some weeks in so magnificent a country. In England any person fond of natural history enjoys in his walks a great advantage, by always having something to attract his attention; but in these fertile climates, teeming with life, the attractions are so numerous, that he is scarcely able to walk at all. The few observations which I was enabled to make were almost exclusively confined to the invertebrate animals. The existence of a division of the genus Planaria, which inhabits the dry land, interested me much. These animals are of so simple a structure, that Cuvier has arranged them with the intestinal worms, though never found within the bodies of other animals. Numerous species inhabit both salt and fresh water; but those to which I allude were found, even in the drier parts of the forest, beneath logs of rotten wood, on which I believe they feed. In general form they resemble little slugs, but are very much narrower in proportion, and several of the species are beautifully coloured with longitudinal stripes. Their structure is very simple: near the middle of the under or crawling surface there are two small transverse slits, from the anterior one of which a funnel-shaped and highly irritable mouth can be protruded. For some time after the rest of the animal was completely dead from the effects of salt water or any other cause, this organ still retained its vitality.

 

 

 

 

 

 

ಬೀಗಲ್ ಸಾಹಸಯಾನ 13

ಏಪ್ರಿಲ್ 14, 1832 – ಸೋಚೆಗೊದಿಂದ ಹೊರಟ ನಾವು ರಿಯೊ ಮಾಚೇ ಯಲ್ಲಿದ್ದ ಮತ್ತೊಂದು ತೋಟಕ್ಕೆ ಸವಾರಿ ಮಾಡಿದೆವು. ಅದು ಆ ದಿಕ್ಕಿನಲ್ಲಿದ್ದ ಕೊನೆಯ ಕೃಷಿ ಭೂಮಿ. ತೋಟವು ಎರಡೂವರೆ ಮೈಲಿ ಉದ್ದವಿತ್ತು. ಅದರ ಅಗಲವೆಷ್ಟು ಎನ್ನುವುದು ಮಾಲೀಕನಿಗೇ ಮರೆತು ಹೋಗಿತ್ತು. ಅದರಲ್ಲಿ ಒಂದು ಪುಟ್ಟ ಜಾಗವನ್ನು ಶುಚಿಗೊಳಿಸಲಾಗಿತ್ತು. ಆ ಭೂಮಿಯ ಪ್ರತಿಯೊಂದು ಎಕರೆಯೂ ಉಷ್ಣವಲಯದ ಭೂಮಿಗಳು ನೀಡಬಲ್ಲಂತಹ ಎಲ್ಲ ಉತ್ಪನ್ನಗಳನ್ನೂ ನೀಡುವಷ್ಟು ಸಮೃದ್ಧಿಯಾಗಿತ್ತು. ಬ್ರೆಜಿಲ್ಲಿನ ಬೃಹತ್ ವಿಸ್ತಾರವನ್ನು ಗಣನೆಗೆ ತೆಗೆದುಕೊಂಡಾಗ ಕೃಷಿಗೊಳಗಾದ ಪ್ರದೇಶದ ಪ್ರಮಾಣ ಪ್ರಕೃತಿ ಸಹಜವಾಗಿ ಉಳಿದ ಭೂಮಿಯ ಮುಂದೆ ನಗಣ್ಯವೆನ್ನಬೇಕು. ಭವಿಷ್ಯದಲ್ಲಿ ಒಂದು ದಿನ ಅದು ಎಷ್ಟು  ಬೃಹತ್ ಜನಸಂಖ್ಯೆಯನ್ನು ಪೋಷಿಸುತ್ತದೆಯೋ! ನಮ್ಮ ಪಯಣದ ಎರಡನೆಯ ದಿನ ನಮ್ಮ ಹಾದಿ ಸಂಪೂರ್ಣ ಮುಚ್ಚಿ ಹೋಗಿದ್ದನ್ನು ಕಂಡೆವು. ಹೀಗಾಗಿ ಆಳೊಬ್ಬ ಮುಂದೆ ಹೋಗಿ ಕತ್ತಿಯಿಂದ ಅಲ್ಲಿದ್ದ ಬಳ್ಳಿಗಳನ್ನೆಲ್ಲ ಕೊಚ್ಚಿ ಹಾದಿ ಮಾಡಬೇಕಾಗಿತ್ತು. ಕಾಡಿನ ತುಂಬಾ ಅದ್ಭುತಗಳಿದ್ದುವು. ಇವುಗಳಲ್ಲಿ ಮರದಲ್ಲಿದ್ದ ಝರಿಗಿಡಗಳೂ ಒಂದು. ಇವು ಬಲು ದೊಡ್ಡವಲ್ಲದಿದ್ದರೂ, ಮನೋಹರವಾಗಿ ಬಾಗಿದ್ದ ಅಚ್ಚ ಹಸುರಿನ ಎಲೆಗಳಿಂದ ಮನಮೆಚ್ಚುವಂತಿದ್ದುವು. ಸಂಜೆಯಾಗುತ್ತಿದ್ದಂತೆ ಭಾರೀ ಮಳೆಯಾಯಿತು. ಥರ್ಮಾಮೀಟರು 650 ತೋರಿಸುತ್ತಿದ್ದರೂ ನನಗೆ ಬಲು ಛಳಿಯೆನಿಸಿತ್ತು. ಮಳೆ ನಿಂತ ಕೂಡಲೇ ಇಡೀ ಕಾಡನ್ನು ಆವರಿಸಿಕೊಂಡಂತೆ ಹಬೆಯೇಳುವುದನ್ನು ಗಮನಿಸಿ ಕೌತುಕವೆನ್ನಿಸಿತು. ಸುಮಾರು 100 ಅಡಿ ಎತ್ತರದ ಗುಡ್ಡಗಳೂ ದಟ್ಟ ಹಬೆಯಲ್ಲಿ ಮುಳುಗಿದ್ದವು. ಈ ಹಬೆ ಮರಗಳು ಅತಿ ದಟ್ಟವಾಗಿದ್ದೆಡೆಯಿಂದ, ವಿಶೇಷವಾಗಿ ಕಣಿವೆಗಳಿಂದ ಮೇಲೇಳುತ್ತಿತ್ತು. ಈ ವಿದ್ಯಮಾನವನ್ನು ನಾನು ಹಲವು ಸಂದರ್ಭಗಳಲ್ಲಿ ಗಮನಿಸಿದ್ದೇನೆ. ಅದಕ್ಕೂ ಮುನ್ನ ಬಿಸಿಲಿನಿಂದ ಕಾದಿದ್ದ ಅಲ್ಲಿಯ ಬೃಹತ್ ವಿಸ್ತೀರ್ಣದ ಪರ್ಣರಾಶಿಯಿಂದಾಗಿ ಹೀಗಾಗುತ್ತಿರಬೇಕು ಎನ್ನುವುದು ನನ್ನ ಊಹೆ.

ಆ ತೋಟದಲ್ಲಿ ಬೀಡು ಬಿಟ್ಟಿದ್ದಾಗ ಗುಲಾಮತನವಿರುವ ದೇಶಗಳಲ್ಲಿ ಮಾತ್ರ ಕಾಣುವಂತಹ ಕ್ರೌರ್ಯವೊಂದನ್ನು ನಾನು ಕಂಡೆ. ಯಾವುದೋ ವ್ಯಾಜ್ಯದಿಂದ  ತೋಟದ ಯಜಮಾನನು ಎಲ್ಲ ಹೆಂಗಸರು ಹಾಗೂ ಮಕ್ಕಳನ್ನು ಗಂಡಸರಿಂದ ಬೇರ್ಪಡಿಸಿ ದೂರದ ರಿಯೋ ನಗರದಲ್ಲಿ ಸಾರ್ವಜನಿಕವಾಗಿ ಹರಾಜು ಹಾಕಲು ಹೊರಟಿದ್ದನು. ಇದು ನಡೆಯದೇ ಹೋದದ್ದಕ್ಕೆ ಕಾರಣ ಕರುಣೆಯಲ್ಲ. ಬಡ್ಡಿ. ಹೀಗೆ ಹಲವಾರು ವರ್ಷಗಳಿಂದ ಒಟ್ಟಿಗೇ ಇದ್ದ ಮೂವತ್ತು ಕುಟುಂಬಗಳನ್ನು ಒಡೆಯುವುದು ಅಮಾನವೀಯತೆ ಎಂಬುದು ಯಜಮಾನನಿಗೆ ತಿಳಿದಿತ್ತು ಎಂಬ ನಂಬಿಕೆ ನನಗಿಲ್ಲ. ಹಾಗಿದ್ದರೂ ಮಾನವೀಯತೆಯಲ್ಲಿ ಹಾಗೂ ಸಹೃದಯತೆಯಲ್ಲಿ ಆತ ಬೇರೆಯವರಿಗಿಂತ ಕಡಿಮೆ ಇರಲಿಲ್ಲ ಎಂದು ನಾನು ಆಣೆಯಿಡಬಲ್ಲೆ.  ಸ್ವಾರ್ಥ ಹಾಗೂ ಕುರುಡು ವಿಶ್ವಾಸಗಳಿಗೆ ಮಿತಿಯಿಲ್ಲವೆಂದಷ್ಟೆ ಹೇಳಬಹುದು. ಇಲ್ಲಿ ಬೇರಾವುದೇ ಕ್ರೌರ್ಯಕ್ಕಿಂತಲೂ ಹೆಚ್ಚು ನನ್ನನ್ನು ತಾಕಿದ ಮತ್ತೊಂದು ಸಣ್ಣ ಘಟನೆಯನ್ನು ಹೇಳಬೇಕು. ನಾನು ಒಬ್ಬ ಅತಿ ಪೆದ್ದ ಕರಿಯನೊಟ್ಟಿಗೆ ದೋಣಿಯಲ್ಲಿ ಸಾಗಿದ್ದೆ. ಅವನಿಗೆ ಅರ್ಥ ಮಾಡಿಕೊಡಲು ಪ್ರಯತ್ನಿಸುತ್ತಾ ನಾನು ಸಂಜ್ಞೆಗಳನ್ನು ಮಾಡುತ್ತ ದೊಡ್ಡ ದನಿಯಲ್ಲಿಯೇ ಮಾತನಾಡುತ್ತಿದ್ದೆ. ಹೀಗೆ ಮಾಡುವಾಗ ನನ್ನ ಕೈ ಒಮ್ಮೆ ಅವನ ಮುಖದ ಸಮೀಪ ಸಾಗಿತು. ಆತನಿಗೆ ನಾನು ಉದ್ವೇಗಗೊಂಡು ಹೊಡೆಯುತ್ತಿದ್ದೇನೆ ಎನ್ನಿಸಿರಬೇಕು. ಹೆದರಿಕೆಯಿಂದ ಕಣ್ಣನ್ನು ಅರ್ಧ ಮುಚ್ಚಿ ಆತ ಎರಡೂ ಕೈಯನ್ನೂ ಕೆಳಚೆಲ್ಲಿ ನಿಂತುಬಿಟ್ಟ.  ಅಂತಹ ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬ ತನಗೆ ಪೆಟ್ಟು ಬೀಳುತ್ತಿದೆ ಎಂದು ಗೊತ್ತಾದಾಗಲೂ ಅದನ್ನು ತಡೆಯದೆಯೇ ಹೀಗೆ ಹೆದರಿದ್ದನ್ನು ಕಂಡು ನನಗೆ ಆಗ ಆದ ಆಶ್ಚರ್ಯ, ಅಸಹ್ಯ ಹಾಗೂ ಅವಮಾನವನ್ನು ನಾನು ಎಂದಿಗೂ ಮರೆಯಲಾರೆ. ಈತ ಗುಲಾಮಗಿರಿಗಿಂತಲೂ ಕೀಳ್ಮಟ್ಟದ  ಅಸಹಾಯಕ ಪ್ರಾಣಿಯಂತೆ ಬೆಳೆದಿದ್ದ.

April 14th, 1832.—Leaving Socêgo, we rode to another estate on the Rio Macâe, which was the last patch of cultivated ground in that direction. The estate was two and a half miles long, and the owner had forgotten how many broad. Only a very small piece had been cleared, yet almost every acre was capable of yielding all the various rich productions of a tropical land. Considering the enormous area of Brazil, the proportion of cultivated ground can scarcely be considered as anything compared to that which is left in the state of nature: at some future age, how vast a population it will support! During the second day’s journey we found the road so shut up that it was necessary that a man should go ahead with a sword to cut away the creepers. The forest abounded with beautiful objects; among which the tree ferns, though not large, were, from their bright green foliage, and the elegant curvature of their fronds, most worthy of admiration. In the evening it rained very heavily, and although the thermometer stood at 65°, I felt very cold.  As soon as the rain ceased, it was curious to observe the extraordinary evaporation which commenced over the whole extent of the forest. At the height of a hundred feet the hills were buried in a dense white vapour, which rose like columns of smoke from the most thickly-wooded parts, and especially from the valleys. I observed this phenomenon on several occasions: I suppose it is owing to the large surface of foliage, previously heated by the sun’s rays.

virginforest
Enter a caption

While staying at this estate, I was very nearly being an eye-witness to one of those atrocious acts which can only take place in a slave country. Owing to a quarrel and a lawsuit, the owner was on the point of taking all the women and children from the male slaves, and selling them separately at the public auction at Rio. Interest, and not any feeling of compassion, prevented this act. Indeed, I do not believe the inhumanity of separating thirty families, who had lived together for many years, even occurred to the owner. Yet I will pledge myself, that in humanity and good feeling he was superior to the common run of men. It may be said there exists no limit to the blindness of interest and selfish habit. I may mention one very trifling anecdote, which at the time struck me more forcibly than any story of cruelty. I was crossing a ferry with a negro who was uncommonly stupid. In endeavouring to make him understand, I talked loud, and made signs, in doing which I passed my hand near his face. He, I suppose, thought I was in a passion, and was going to strike him; for instantly, with a frightened look and half-shut eyes, he dropped his hands. I shall never forget my feelings of surprise, disgust, and shame, at seeing a great powerful man afraid even to ward off a blow, directed, as he thought, at his face. This man had been trained to a degradation lower than the slavery of the most helpless animal.

 

 

 

ಬೀಗಲ್ ಸಾಹಸಯಾನ 12

ಮೆಂಡೆತೀಬಾದಿಂದ ಹೊರಟ ನಾವು ಸರೋವರಗಳು ಚಿತ್ತಾರ ಮೂಡಿಸಿದ್ದ ನಿರ್ಜನ ಪ್ರದೇಶದಲ್ಲಿ ಸಾಗಿದೆವು. ಕೆಲವು ಸರೋವರಗಳಲ್ಲಿ ಸಿಹಿನೀರಿನ ಚಿಪ್ಪುಗಳೂ ಇನ್ನು ಕೆಲವದರಲ್ಲಿ ಉಪ್ಪುನೀರಿನಲ್ಲಿರುವ ಚಿಪ್ಪುಗಳೂ ಇದ್ದುವು. ಮೊದಲನೆಯ ಬಗೆಯ ಸರೋವರಗಳಲ್ಲೊಂದರಲ್ಲಿ ನಾನು ಎಣಿಸಲಾರದಷ್ಟು ಸಂಖ್ಯೆಯ ಲಿಮ್ನಿಯಾಗಳನ್ನು ಕಂಡೆ. ಈ ಸರೋವರದೊಳಗೆ ವರ್ಷಕ್ಕೊಮ್ಮೆ ಎನ್ನುವಂತೆ ಮತ್ತು ಕೆಲವೊಮ್ಮೆ ಆಗಾಗ್ಗೆ ಸಮುದ್ರ ಉಕ್ಕಿ ಹರಿದು ಬಂದು ನೀರನ್ನು ಉಪ್ಪಾಗಿಸಿದೆ ಎಂದು ಅಲ್ಲಿನ ಜನ ಖಚಿತಪಡಿಸಿದರು. ಬ್ರೆಜಿಲ್ಲಿನ ಕರಾವಳಿಯನ್ನು ಸುತ್ತುವರಿದ ಈ ಕೊಳಗಳ ಸರಪಳಿಯಲ್ಲಿ ಸಿಹಿನೀರಿನ ಹಾಗೂ ಉಪ್ಪುನೀರಿನ ಪ್ರಾಣಿಗಳ ಬಗ್ಗೆ ಹಲವು ಕೌತುಕಮಯ ಸಂಗತಿಗಳನ್ನು ಕಾಣಬಹುದು. ಎಂ. ಗೇ ಎನ್ನವವರು ರಿಯೋದ ನೆರೆಹೊರೆಯ ಜೌಗು ಪ್ರದೇಶಗಳಲ್ಲಿ  ಸೋಲೆನ್ (ಕೊಳವೆಯಾಕಾರದ ಚಿಪ್ಪಿರುವ) ಹಾಗೂ ಮೈಟಿಲಸ್ ಕುಲಕ್ಕೆ ಸೇರಿದ ಕಪ್ಪೆಚಿಪ್ಪಿನ ಸಾಗರಜೀವಿಗಳು, ಆಂಪುಲ್ಲೇರಿಯೇ ಕುಲದ ಸಿಹಿನೀರಿನ ಜೀವಿಗಳ ಸಹವಾಸಿಗಳಾಗಿ ಇದ್ದುವೆಂದು ತಿಳಿಸಿದ್ದಾರೆ. ಸಸ್ಯೋದ್ಯಾನಕ್ಕೆ ಸಮೀಪದಲ್ಲಿರುವ ಜೌಗು ಪ್ರದೇಶದಲ್ಲಿ ಇರುವ ಹಾಗೂ ಸಮುದ್ರದ ನೀರಿಗಿಂತ ತುಸುವೇ ಕಡಿಮೆ ಉಪ್ಪಾಗಿರುವ ನೀರಿನ ಕೊಳದಲ್ಲಿ ಇಂಗ್ಲೆಂಡಿನ ಚರಂಡಿಗಳಲ್ಲಿ ಕಾಣಬರುವ ಜಲದುಂಬಿಗಳಿಗೆ ಹೋಲುವ ಹೈಡ್ರೊಫಿಲಸ್ ಪ್ರಬೇಧವೊಂದನ್ನು ಕಂಡೆ. ಅದೇ ಕೊಳದಲ್ಲಿ ಕಂಡ ಕಪ್ಪೆಚಿಪ್ಪೊಂದು ನದಿಯ ಅಳಿವೆಗಳಲ್ಲಿ ದೊರಕುವ ಜಾತಿಯದಾಗಿತ್ತು.

 

ನಾವು ತೀರವನ್ನು ಬಿಟ್ಟು ಮತ್ತೆ ಕಾಡನ್ನು ಪ್ರವೇಶಿಸಿದೆವು. ಇಲ್ಲಿನ ಮರಗಳು ಯುರೋಪಿನವಂತೆಯೇ ಎತ್ತರವಾಗಿದ್ದುದರ ಜೊತೆಗೇ ಅವುಗಳ ಬಿಳಿಯ ಕಾಂಡಗಳು ವಿಶಿಷ್ಟವಾಗಿದ್ದುವು. “ಹೂ ಬಿಡುವ ಸುಂದರವಾದ ಪರಜೀವಿಗಳು,” ಎಂದು ನನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದೆ. ಇಲ್ಲಿನ ಅದ್ಭುತ ನೋಟಗಳಲ್ಲಿ ಇದುವೇ ಬಲು ವಿಶಿಷ್ಟ ಎಂದು ನನಗೆ ಅನಿಸಿತ್ತು. ಹಾಗೇ ಮುಂದೆ ಸಾಗಿದ ನಾವು ಶಂಖುವಿನಾಕಾರದ ಹುತ್ತಗಳಿಂದ ಹುಣ್ಣಾಗಿದ್ದ ಹುಲ್ಲುಗಾವಲುಗಳೊಳಗೆ ನಡೆದೆವು. ಕೆಲವೊಂದು ಹುತ್ತಗಳು ಹನ್ನೆರಡು ಅಡಿಗಳಷ್ಟು ಎತ್ತರವೂ ಇದ್ದುವು. ಹಂಬೋಲ್ಟ್ ಜೋರುಲ್ಲೋದಲ್ಲಿ ಇದ್ದ ಮಣ್ಣಿನ ಜ್ವಾಲಾಮುಖಿಗಳನ್ನು ಚಿತ್ರಿಸಿದ್ದಂತೆಯೇ ಇವು ಕಾಣುತ್ತಿದ್ದುವು. ಹತ್ತು ಗಂಟೆಗಳ ಕಾಲದ ಕುದುರೆ ಸವಾರಿಯ ನಂತರ ನಾವು ಐಗೆನ್ ಹೋದೊ ತಲುಪಿದೆವು. ಅಷ್ಟರಲ್ಲಿ ಕತ್ತಲಾಗಿತ್ತು. ಪಯಣದುದ್ದಕ್ಕೂ ಕುದುರೆಗಳು ತಾಳಿಕೊಂಡ ಶ್ರಮವನ್ನು ಕಂಡು ಬೆರಗಾಗಿದ್ದೆ. ತಮಗೆ ಆಗಿರುವ ಯಾವುದೇ ಗಾಯದಿಂದಲೂ ಇವು ಇಂಗ್ಲೀಷು ತಳಿಗಳಿಗಿಂತಲೂ ಬೇಗನೆ ಚೇತರಿಸಿಕೊಳ್ಳುವಂತೆ ತೋರಿತು.  ಗೋಣನ್ನು ಕಚ್ಚಿ ರಕ್ತ ಹೀರುತ್ತಿದ್ದ ಬಾವಲಿಗಳು ಇವುಗಳಿಗೆ ದೊಡ್ಡ ಪೀಡೆಯಾಗಿತ್ತು. ರಕ್ತ ಹರಿದು ಆಗ ಗಾಯದಿಂದ ಆಗುತ್ತಿದ್ದ ತೊಂದರೆಗಿಂತಲೂ ಅಲ್ಲಿ ಅನಂತರ ಗಾದಿಯೊತ್ತಿ ಉಂಟಾಗುತ್ತಿದ್ದ ಬಾವು ಬಹಳ ತೊಂದರೆಕೊಡುತ್ತಿತ್ತು. ಇಂಗ್ಲೆಂಡಿನಲ್ಲಿ ಇಂತಹ ಬಾವಲಿಗಳ ಇವೆ ಎನ್ನುವುದನ್ನೇ ಸಂದೇಹಿಸುತ್ತಾರೆ.  ಡೆಸ್ಮೋಡಸ್ ಡಿ ಆರ್ಬಿಗ್ನಿಯಿ ಎನ್ನುವ ಬಾವಲಿಯೊಂದನ್ನು ಕುದುರೆಯ ಬೆನ್ನಿನಿಂದ ಹೆಕ್ಕುವ ಅದೃಷ್ಟ ನನಗೆ ಸಿಕ್ಕಿತು.  ಚಿಲಿಯಲ್ಲಿ ಕೊಕಿಂಬೋ ಸಮೀಪದಲ್ಲಿ ಒಂದು ಸಂಜೆ ಬೀಡು ಬಿಟ್ಟಿದ್ದಾಗ ಕುದುರೆಯೊಂದು ಚಡಪಡಿಸುತ್ತಿದ್ದುದನ್ನು ಆಳು ಗಮನಿಸಿ ಅದೇನೆಂದು ನೋಡಲು ಹೋದವನು, ಯಾಕೋ ಕುದುರೆಯ ಗೋಣಿಗೆ ಕೈ ಹಾಕಿ ರಕ್ತ ಪಿಪಾಸು ಬಾವಲಿಯನ್ನು ಹೆಕ್ಕಿದ್ದ. ಬೆಳಗ್ಗೆ ಊತ ಹಾಗೂ ರಕ್ತದಿಂದಾಗಿ ಅದು ಕಚ್ಚಿದ್ದ ಜಾಗವನ್ನು ಗುರುತಿಸಬಹುದಾಗಿತ್ತು.  ಮೂರನೆ ದಿನದಿಂದ ಯಾವುದೇ ತೊಂದರೆಯಿಲ್ಲದೆ ಮತ್ತೆ ಸವಾರಿ ಮುಂದುವರೆಸಿದೆವು.

vampire.jpg
ಡಾರ್ವಿನ್ನನ ಕುದುರೆಯ ಗೋಣಿನಿಂದ ಹೆಕ್ಕಿದ ರಕ್ತಪಿಪಾಸು ಡೆಸ್ಮೊಡಸ್ ಡಿ. ಆರ್ಬಿಂಗ್ನಿ

ಏಪ್ರಿಲ್ 13ಮ 1832 – ಮೂರು ದಿನಗಳ ಪಯಣದ ನಂತರ ನಾವು ಸೋಶೆಗೋ ದಲ್ಲಿ ನಮ್ಮ ತಂಡದವರೊಬ್ಬರ ನೆಂಟರ ಮನೆಯನ್ನು ತಲುಪಿದೆವು. ಸರಳವಾದ ಮನೆ, ಹಿತ್ತಲಿನಂತೆಯೇ ಕಂಡರೂ ಆ ಹವೆಗೆ ತಕ್ಕುದಾಗಿತ್ತು. ಸುಣ್ಣ ಬಳಿದ ಗೋಡೆ, ಹುಲ್ಲಿನ ಛಾವಣಿ, ಗಾಜಿಲ್ಲದ ತೆರೆದ ಕಿಟಕಿಗಳ ಹಿನ್ನೆಲೆಯಲ್ಲಿ ಅಲ್ಲಿದ್ದ  ಚಿನ್ನದ ಮೆರುಗಿನ ಕುರ್ಚಿಗಳೂ, ಸೋಫಾಗಳು ಎದ್ದು ಕಾಣುತ್ತಿದ್ದುವು. ಧಾನ್ಯದ ಕಣಜ, ಕುದುರೆ ಲಾಯ ಹಾಗೂ ಕರಿಜನರಿಗಾಗಿ ಇದ್ದ ಕಸುಬಿನಂಗಡಿಗಳು ಒಂದು ಚೌಕವನ್ನು ನಿರ್ಮಿಸಿದ್ದುವು. ಕರಿಜನರಿಗೆ ಹಲವು ಕಸುಬುಗಳನ್ನು ಕಲಿಸಲಾಗಿತ್ತು. ಇವೆಲ್ಲವೂ ಉತ್ತ ಗದ್ದೆಯೆದುರಿಗಿದ್ದ ಪುಟ್ಟ ಗುಡ್ಡವೊಂದರ ಮೇಲೆ ಇದ್ದುವು. ಸುತ್ತಲೂ ಗಾಢ ಹಸುರಿನ ಕೋಟೆ ಇತ್ತು. ಕಾಫಿ ಈ ಪ್ರದೇಶದಲ್ಲಿನ ಪ್ರಮುಖ ಬೆಳೆ. ಪ್ರತಿ ಮರವೂ ವರ್ಷಕ್ಕೆ ಅಂದಾಜು ಎರಡು ಪೌಂಡು ಕಾಫಿ ಕೊಡುತ್ತಿದ್ದುವು. ಕೆಲವಂತೂ ಎಂಟು ಪೌಂಡುಗಳನ್ನೂ ಕೊಡುತ್ತಿದ್ದುವು. ಇದೇ ರೀತಿಯಲ್ಲಿ ಮರಗೆಣಸನ್ನೂ ಬೃಹತ್ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಇದರ ಪ್ರತಿಯೊಂದು ಭಾಗವೂ ಉಪಯುಕ್ತವಾಗಿತ್ತು. ಕಾಂಡ ಮತ್ತು ಎಲೆಗಳು ಕುದುರೆಗಳಿಗೆ ಆಹಾರವಾಗಿದ್ದುವು. ಬೇರನ್ನುಉ ಅರೆದು ಹಿಟ್ಟು ತೆಗೆದು ಅದನ್ನು ತಟ್ಟಿ ಸುಟ್ಟು ಫಾರಿನ್ಹ ಎನ್ನುವ ತಿನಿಸನ್ನು ತಯಾರಿಸುತ್ತಿದ್ದರು. ಇದು ಬ್ರೆಜಿಲ್ಲಿನ ಪ್ರಮುಖ ತಿನಿಸು.  ಇಲ್ಲಿ ಅಪ್ರಸ್ತುತವೆನ್ನಿಸಿದರೂ, ಈ ಗಿಡದ ರಸ ವಿಷಕಾರಿ ಎನ್ನುವುದು ಕುತೂಹಲಕರ ಸಂಗತಿ. ಇಲ್ಲಿನ ಫಾಜೆಂಡಾ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಹಸು ಇದರ ರಸವನ್ನು ಕುಡಿದ ಕಾರಣದಿಂದ ಸತ್ತಿತ್ತಂತೆ.  ಶ್ರೀ ಫಿಗ್ವಿರೆಡಾ ಕಳೆದ ವರ್ಷ ತಾನು ಒಂದು ಚೀಲ ಫೆಯಾಓ ಅಂದರೆ ಕಾಳುಗಳನ್ನೂ, ಮೂರು ಚೀಲ ಭತ್ತವನ್ನೂ ಬಿತ್ತಿದ್ದಾಗಿ ತಿಳಿಸಿದ. ಇವುಗಳಿಂದ ಎಂಭತ್ತು ಮಡಿ ಮಿಗಿಲಾದ ಕಾಳುಗಳನ್ನೂ, ಮುನ್ನೂರ ಇಪ್ಪತ್ತು ಮಡಿ ಮಿಗಿಲಾದ ಭತ್ತವನ್ನೂ ಪಡೆದನೆಂದು ತಿಳಿಸಿದ. ಅಲ್ಲಿದ್ದ ಹುಲ್ಲುಗಾವಲು ಬಲು ಉತ್ತಮ ತಳಿಯ ದನಗಳನ್ನು ಪೋಷಿಸುತ್ತಿತ್ತು. ಕಾಡಿನಲ್ಲಿ ಸಾಕಷ್ಟು ವನ್ಯಜೀವಿಗಳಿದ್ದುವು. ನಾವಿದ್ದ ಮೂರು ದಿನಗಳೂ ಒಂದೊಂದು ಜಿಂಕೆಯನ್ನು ಸೇವಿಸಿದ್ದೆವು. ಭೋಜನದ ವೇಳೆ ತಿಂಡಿ ತಿನಿಸುಗಳು ಭರ್ಜರಿಯಾಗಿರುತ್ತಿದ್ದುವು. ಅವುಗಳ ಭಾರದಿಂದ ಊಟದ ಮೇಜು ನಲುಗದಿದ್ದರೂ, ಅತಿಥಿಗಳಂತೂ ನಲುಗುತ್ತಿದ್ದರು. ಹೀಗೇ ಒಂದು ದಿನ ಯಾವುದನ್ನೂ ರುಚಿ ನೋಡದೆ ಬಿಡಬಾರದು ಎಂದು ನಿಶ್ಚಯಿಸಿದ್ದವನಿಗೆ, ಒಂದು ಸುಟ್ಟ ಭರ್ಜರಿ ಕೋಳಿ ಹಾಗೂ ಹಂದಿ ಎದುರಾದುವು. ನಾವು ಊಟ ಮಾಡುವಾಗ ಅವಕಾಶ ಸಿಕ್ಕ ಕೂಡಲೇ ಅಲ್ಲಿಗೆ ದಾಳಿಯಿಡುತ್ತಿದ್ದ  ನಾಯಿಗಳು ಹಾಗೂ ಡಜನ್ ಗಟ್ಟಲೆ ಕರಿಯರ ಮಕ್ಕಳನ್ನು ಓಡಿಸುವುದೇ ಒಬ್ಬನಿಗೆ ಕಾಯಕವಾಗಿತ್ತು. ಗುಲಾಮಗಿರಿಯನ್ನು ಪ್ರತಿಬಂಧಿಸಬೇಕು ಎನ್ನುವುದು ಒತ್ತಟ್ಟಿಗಿಟ್ಟರೆ, ಈ ರೀತಿಯ ಸರಳವಾದ, ಪಿತೃಪ್ರಭುತ್ವದ ಬದುಕಿನಲ್ಲಿ ಏನೋ ಸ್ವಾರಸ್ಯವಿದೆ. ಇದು ಇತರೆ ಪ್ರಾಪಂಚಿಕ ವಿಷಯಗಳಿಂದ ಮುಕ್ತವಾದ ಪಕ್ಕಾ ಆರಾಮದ ಜೀವನ. ಯಾರಾದರೂ ಅಪರಿಚಿತರು ಬರುವುದು ಕಾಣಿಸಿದ ಕೂಡಲೇ ಒಂದು ದೊಡ್ಡ ಗಂಟೆ ಬಾರಿಸುತ್ತಿತ್ತು. ಕೆಲವೊಮ್ಮೆ ಪುಟ್ಟ ಫಿರಂಗಿಗುಂಡುಗಳನ್ನೂ ಹಾರಿಸಲಾಗುತ್ತಿತ್ತು. ಹೀಗೆ ಸುದ್ದಿ ತಿಳಿಸುತ್ತಿದ್ದಿದ್ದು ಬರೇ ಗುಡ್ಡ, ಕಾನುಗಳಿಗೆ ಅಷ್ಟೆ. ಇನ್ಯಾರಿಗೂ ಅಲ್ಲ. ಒಂದು ಮುಂಜಾನೆ ನಾನು ಅಲ್ಲಿನ ಪ್ರಶಾಂತತೆಯನ್ನು ಅನುಭವಿಸಲೆಂದು ಸೂರ್ಯೋದಯಕ್ಕಿಂತಲೂ ಒಂದು ತಾಸು ಮುನ್ನವೇ ಎದ್ದು ಹೊರ ನಡೆದೆ. ಕೊನೆಗೂ ಬೆಳಗ್ಗಿನ ಪ್ರಾರ್ಥನೆಯಿಂದ ಈ ನಿಶ್ಶಬ್ದ ಮುರಿಯಿತು. ಇಡೀ ಕರಿಯ ಜನಾಂಗವೇ ಎದ್ದು ಏರು ಧ್ವನಿಯಲ್ಲಿ ಪ್ರಾರ್ಥಿಸಿತು. ಅವರ ದಿನದ ನಿತ್ಯಕರ್ಮಗಳೆಲ್ಲವೂ ಹೀಗೆ ಪ್ರಾರ್ಥನೆಯಿಂದ ಆರಂಭವಾಗುತ್ತಿತ್ತು. ಇಂತಹ ಸಂದರ್ಭಗಳನ್ನು ಗಮನಿಸಿದಾಗ ಇವರು ಗುಲಾಮರಾಗಿದ್ದರೂ ಕೂಡ ತೃಪ್ತ ಹಾಗೂ ಖುಷಿಯ ಬದುಕನ್ನು ಇವರು ಸಾಗಿಸುತ್ತಿದ್ದಾರೆನ್ನುವುದರಲ್ಲಿ ನನಗೆ ಸಂದೇಹವಿರಲಿಲ್ಲ. ಶನಿವಾರ ಮತ್ತು ಭಾನುವಾರಗಳು ಅವರ ಸ್ವಂತ ಕೆಲಸಕ್ಕೆ. ಇಲ್ಲಿನ ಸಮೃದ್ಧ ಪರಿಸರದಲ್ಲಿ ತನ್ನ ಕುಟುಂಬ ಹಾಗೂ ಮಕ್ಕಳನ್ನು ಮುಂದಿನ ವಾರವೆಲ್ಲವೂ ಪಾಲಿಸಲು ಬೇಕಾದಷ್ಟನ್ನು ಪಡೆಯಲು ಈ ಎರಡೇ ದಿನಗಳು ಸಾಕಿತ್ತು.

ಅನುವಾದಕನ ಟಿಪ್ಪಣಿ:

ಲಿಮ್ನಿಯಾ ಎನ್ನುವುದು ಸಾಗರವಾಸಿ. ಇದನ್ನು ಒಳನಾಡಿನ ಸರೋವರಗಳಲ್ಲಿ ಕಂಡು, ಅವು ಹೇಗೆ ಅಲ್ಲಿ ಬಂದಿರಬಹುದು ಎಂದು ಡಾರ್ವಿನ್ ಊಹಿಸುವುದು ಸ್ವಾರಸ್ಯಕರ. ಅದಕ್ಕೆ ತಕ್ಕ ಇತರೆ ಪುರಾವೆಗಳನ್ನೂ ಆತ ನೀಡುವುದನ್ನು ಗಮನಿಸಿ.

 

ರಕ್ತ ಹೀರುವ ಬಾವಲಿಗಳು ಇವೆ ಎನ್ನುವ ಬಗ್ಗೆಯೇ ಬಹಳಷ್ಟು ಸಂದೇಹಗಳಿದ್ದುವು. ಈ ಸಂದೇಹದ ಬಗ್ಗೆಯೂ ಡಾರ್ವಿನ್ ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾನೆ

 

ಕರಿಯ ಜನರನ್ನು ಗುಲಾಮರನ್ನಾಗಿ ವಸಾಹತುಶಾಹಿ ಯುರೋಪಿಯನ್ನರು ಬಳಸಿಕೊಳ್ಳುತ್ತಿದ್ದುದೂ, ಅದರ ಔಚಿತ್ಯದ ಬಗ್ಗೆ ಪ್ರಶ್ನೆಗಳಿದ್ದುದೂ ಈ ಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಡಾರ್ವಿನ್ನನ ಅಭಿಪ್ರಾಯಗಳು ಅಡ್ಡಗೋಡೆಯ ಮೇಲಿದ್ದಂತೆ ಇರುವುದು ವಿಶೇಷ. ಅಂದಿನ ದಿನಗಳಲ್ಲಿ ಕರಿಯರು ಎನ್ನುವ ಪದದ ಬಳಕೆಯ ಬಗ್ಗೆ ಯಾರಿಗೂ ಆಕ್ಷೇಪವಿರಲಿಲ್ಲ. ಅಂದಿನ ಈ ಪಾಠವನ್ನು ಅನುವಾದಿಸುವಾಗ ಅಂದಿನ ಬಳಕೆಯನ್ನು ತಿದ್ದಿ, ತೀಡಿ, ಇಂದಿನ ಅರ್ಥಗಳು ಧ್ವನಿಸುವಂತೆ ಮಾಡುವ ಅಧಿಕಾರ ಅನುವಾದಕನಿಗೆ ಇಲ್ಲ ಎನ್ನುವ ಭಾವನೆ ನನ್ನದು. ಹೀಗಾಗಿ ಅವನ್ನು ಹಾಗೆಯೇ ಅನುವಾದಿಸಿದ್ದೇನೆ.

 

 

Leaving Mandetiba, we continued to pass through an intricate wilderness of lakes; in some of which were fresh, in others salt water shells. Of the former kind, I found a Limnæa in great numbers in a lake, into which the inhabitants assured me that the sea enters once a year, and sometimes oftener, and makes the water quite salt. I have no doubt many interesting facts in relation to marine and fresh-water animals might be observed in this chain of lagoons which skirt the coast of Brazil. M. Gay1 has stated that he found in the neighbourhood of Rio shells of the marine genera solen and mytilus, and fresh-water ampullariæ, living together in brackish water. I also frequently observed in the lagoon near the Botanic Garden, where the water is only a little less salt than in the sea, a species of hydrophilus, very similar to a water-beetle common in the ditches of England: in the same lake the only shell belonged to a genus generally found in estuaries.

Leaving the coast for a time, we again entered the forest. The trees were very lofty, and remarkable, compared with those of Europe, from the whiteness of their trunks. I see by my notebook, “wonderful and beautiful flowering parasites,” invariably struck me as the most novel object in these grand scenes. Travelling onwards we passed through tracts of pasturage, much injured by the enormous conical ants’ nests, which were nearly twelve feet high. They gave to the plain exactly the appearance of the mud volcanoes at Jorullo, as figured by Humboldt. We arrived at Engenhodo after it was dark, having been ten hours on horseback. I never ceased, during the whole journey, to be surprised at the amount of labour which the horses were capable of enduring; they appeared also to recover from any injury much sooner than those of our English breed. The Vampire bat is often the cause of much trouble, by biting the horses on their withers. The injury is generally not so much owing to the loss of blood, as to the inflammation which the pressure of the saddle afterwards produces. The whole circumstance has lately been doubted in England; I was therefore fortunate in being present when one (Desmodus d’orbignyi, Wat.) was actually caught on a horse’s back. We were bivouacking late one evening near Coquimbo, in Chile, when my servant, noticing that one of the horses was very restive, went to see what was the matter, and fancying he could distinguish something,  suddenly put his hand on the beast’s withers, and secured the vampire. In the morning the spot where the bite had been inflicted was easily distinguished from being slightly swollen and bloody. The third day afterwards we rode the horse, without any ill effects.

April 13th, 1832.—After three days’ travelling we arrived at Socêgo, the estate of Senhôr Manuel Figuireda, a relation of one of our party. The house was simple, and, though like a barn in form, was well suited to the climate. In the sitting-room gilded chairs and sofas were oddly contrasted with the whitewashed walls, thatched roof, and windows without glass. The house, together with the granaries, the stables, and workshops for the blacks, who had been taught various trades, formed a rude kind of quadrangle; in the centre of which a large pile of coffee was drying. These buildings stand on a little hill, overlooking the cultivated ground, and surrounded on every side by a wall of dark green luxuriant forest. The chief produce of this part of the country is coffee. Each tree is supposed to yield annually, on an average, two pounds; but some give as much as eight. Mandioca or cassava is likewise cultivated in

 

page 23

 

great quantity. Every part of this plant is useful: the leaves and stalks are eaten by the horses, and the roots are ground into a pulp, which, when pressed dry and baked, forms the farinha, the principal article of sustenance in the Brazils. It is a curious, though well- great quantity. Every part of this plant is useful: the leaves and stalks are eaten by the horses, and the roots are ground into a pulp, which, when pressed dry and baked, forms the farinha, the principal article of sustenance in the Brazils. It is a curious, though well-of the scene; known fact, that the juice of this most nutritious plant is highly poisonous. A few years ago a cow died at this Fazênda, in consequence of having drunk some of it. Senhôr Figuireda told me that he had planted, the year before, one bag of feijaô or beans, and three of rice; the former of which produced eighty, and the latter three hundred and twenty fold. The pasturage supports a fine stock of cattle, and the woods are so full of game that a deer had been killed on each of the three previous days.

This profusion of food showed itself at dinner, where, if the tables did not groan, the guests surely did; for each person is expected to eat of every dish. One day, having, as I thought, nicely calculated so that nothing should go away untasted, to my utter dismay a roast turkey and a pig appeared in all their substantial reality. During the meals, it was the employment of a man to drive out of the room sundry old hounds, and dozens of little black children, which crawled in together, at every opportunity. As long as the idea of slavery could be banished, there was something exceedingly fascinating in this simple and patriarchal style of living: it was such a perfect retirement and independence from the rest of the world. As soon as any stranger is seen arriving, a large bell is set tolling, and generally some small cannon are fired. The event is thus announced to the rocks and woods, but to nothing else. One morning I walked out an hour before daylight to admire the solemn stillness at last, the silence was broken by the morning hymn, raised on high by the whole body of the blacks; and in this manner their daily work is generally begun. On such fazêndas as these, I have no doubt the slaves pass happy and contented lives. On Saturday and Sunday they work for themselves, and in this fertile climate the labour of two days is sufficient to support a man and his family for the whole week.

 

 

 

 

ಪರಿಸರದ ಹೊಸ ಕನಸು

ಕರುಣೆ,ನೀರಿಲ್ಲದ ನೆಲದಲ್ಲಿ
ಬೆವರ ಹನಿಯೊಂದು
ನೆತ್ತರ ಪ್ರವಾಹಕೆ ಸಿಕ್ಕಿ
ಅತ್ತು ಕರೆಯುತ್ತಿದೆ
ಬನ್ನಿ…
ಓ ಭರವಸೆಯ ಮೋಡಗಳೇ
ಮಳೆಯಾಗಿ ತೊಳೆಯಿರಿ
ಕೆಂದೂಳ ಹಗೆಯ
ಹೊಳೆಯಾಗಿ ಕಳೆಯಿರಿ
ಬೆಂದೊಡಲ ಧಗೆಯ
ಅಲ್ಲಿ…
ದೂರದಲ್ಲೆಲ್ಲೋ
ನಂಜು ನಾಲಗೆಯ ಕುಹಕ ನಗು
ಕೇಕೆ…
ಯಾಕೆಂದು ಕೇಳದಿರಿ ಜೋಕೆ…!
ಯಂತ್ರ ಕುತಂತ್ರದ ಕೋರೆ
ಭೂಗರ್ಭ ಸೀಳಿ ಸದ್ದು ಮಾಡಿದೆ
ಝಣ ಝಣ…!
ಅದಿರಿನ ಖದರು….
ಯಾರಿದ್ದಾರೆ ನಿನ್ನ ಎದಿರು..?
ಗಣಿ ಮಣ್ಣ ಕಣದಲ್ಲಿ
ಹಸಿರಿಗೀಗ ಬರಗಾಲ
ಇಲ್ಲಿ..
ಬಾನಲ್ಲಿ…
ಹೊಗೆ ಕಾವಳಗಳ ಕಪ್ಪು ಚಿತ್ತಾರ
ಬರಿದಾಯ್ತು ಓಝೋನ್
ಉಸಿರ ಗಾಳಿ ಮಸಿ ಹಿಡಿದು
ಬಿಸಿಯಾಗಿ ಕಾದಿದೆ
ಜೀವ ಸಂಕುಲಕ್ಕೀಗ ಕೇಡುಗಾಲ
ಬನ್ನಿ….
ಓ ಭರವಸೆಯ ಮೋಡಗಳೇ
ಮಳೆಯಾಗಿ ಬೆಳೆಯಾಗಿ
ಶುದ್ದಿಯಾಗಿ ಬುದ್ಧಿಯಾಗಿ
ಕವಿದ ಕತ್ತಲೆಗೆ ಬೆಳಕಾಗಿ
ಬೆವೆತು ಸೋತ ಪರಿಸರಕೆ
ಹೊಸ ಚಿಗುರು ಕನಸಾಗಿ…..!

■ ವರದ
‎ ವಿಜ್ಞಾನ ಶಿಕ್ಷಕರು
‎ ಸ.ಪ.ಪೂ. ಕಾಲೇಜು ಬ್ರಹ್ಮಾವರ

ಬೀಗಲ್ ಸಾಹಸಯಾನ-11

ಅಧ್ಯಾಯ 2

 ರಿಯೋಡಿಜನೈರೊ ಕೇಪ್ ಫ್ರಯೋದ ಉತ್ತರಕ್ಕೊಂದು ಚಾರಣ ಅಮೋಘ ಬಾಷ್ಪೀಭವನ – ಗುಲಾಮಗಿರಿ – ಬೋಟೊಫೋಗೋ ಕೊಲ್ಲಿ -ನೆಲವಾಸಿ ಪ್ಲಾನೇರಿಯಾ – ಕೋರ್ಕೊವಾಡೊದ ಮೋಡಗಳು – ಭಾರೀ ಮಳೆ – ಹಾಡುವ ಕಪ್ಪೆಗಳು – ಮಿನುಗುವ ಕೀಟಗಳು – ಇಲೇಟರಿನ ಚಿಮ್ಮುವ ಸಾಮರ್ಥ್ಯ – ನೀಲಿ ಮಬ್ಬು – ಚಿಟ್ಟೆ ಮಾಡುವ ಸದ್ದು – ಕೀಟವಿಜ್ಞಾನ – ಇರುವೆಗಳು – ಜೇಡವನ್ನು ಕೊಂದ ಕಣಜ – ಪರಾವಲಂಬಿ ಜೇಡ – ಎಪೆಇರಾದ ಕಲೆ – ಬಕಾಸುರ ಜೇಡ – ಅಸಮವಾದ ಬಲೆ ನೇಯುವ ಜೇಡ

ರಿಯೊ ಡೆ ಜನೈರೊ

ಏಪ್ರಿಲ್ 4 ರಿಂದ ಜುಲೈ 5, 1832 – ನಾವು ಇಲ್ಲಿಗೆ ತಲುಪಿದ ಕೆಲವು ದಿನಗಳ ನಂತರ ರಾಜಧಾನಿಯಿಂದ ನೂರು ಮೈಲುಗಳಾಚೆ, ಕೇಪ್ ಫ್ರಯೋದ ಉತ್ತರಕ್ಕೆ ಇದ್ದ ತನ್ನ ಎಸ್ಟೇಟನ್ನು ನೋಡಲು ಹೊರಟಿದ್ದ ಮಹಾನುಭಾವನೊಬ್ಬನ ಪರಿಚಯವಾಯಿತು. ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಅವನ ಆಹ್ವಾನವನ್ನು ಸಂತೋಷದಿಂದಲೇ ಒಪ್ಪಿಕೊಂಡೆ.

ಏಪ್ರಿಲ್ 8, 1932.- ನಮ್ಮದು ಏಳು ಜನರ ಗುಂಪು. ಪ್ರಯಾಣದ ಮೊದಲ ಹಂತ ಸ್ವಾರಸ್ಯಕರವಾಗಿತ್ತು. ಹಗಲು ಬಲು ಬಿಸಿಯಾಗಿತ್ತು. ನಾವು ಕಾಡಿನೊಳಗಿಂದ ಸಾಗಿದಾಗ ದೊಡ್ಡ, ಹೊಳೆಯುವ ಚಿಟ್ಟೆಗಳ  ನಿಧಾನವಾದ ಹಾರಾಟವನ್ನು ಬಿಟ್ಟರೆ ಉಳಿದೆಲ್ಲವೂ ನಿಶ್ಚಲವಾಗಿತ್ತು. ಪ್ರಿಯಾ ಗ್ರಾಂಡಿಯ ಹಿಂದೆ ಇದ್ದ ಬೆಟ್ಟಗಳನ್ನು ದಾಟುವಾಗಿನ ದೃಶ್ಯವಂತೂ ಬಲು ಸುಂದರವಾಗಿತ್ತು. ಬಣ್ಣಗಳೆಲ್ಲವೂ ಗಾಢವಾಗಿ ತೋರಿದುವು. ಕಡು ನೀಲಿ ಬಣ್ಣವೇ ಪ್ರಧಾನವಾಗಿತ್ತು. ಆಕಾಶ ಹಾಗೂ ಶಾಂತವಾಗಿದ್ದ ಸಾಗರದ ನೀರು ಸೌಂದರ್ಯದಲ್ಲಿ ಒಂದನ್ನೊಂದು ಮೀರಿಸಲು ಪ್ರಯತ್ನಿಸುತ್ತಿದ್ದುವು. ಒಂದಿಷ್ಟು ಕೃಷಿ ಭೂಮಿಯನ್ನು ದಾಟಿ ಸಾಗಿದ ಮೇಲೆ ಒಂದು ಅದ್ಭುತವಾದ ಕಾಡನ್ನು ಕೂಡಿದೆವು. ಅದರ ಪ್ರತಿಯೊಂದು ಭಾಗದ ವೈಭವಕ್ಕೆ ಮಿಗಿಲಾದದ್ದು ಇಲ್ಲ. ನಡುಮಧ್ಯಾಹ್ನದ ವೇಳಗೆ ನಾವು ಇಥಾಕಿಯ ತಲುಪಿದೆವು.  ಈ ಪುಟ್ಟಹಳ್ಳಿಯೊಂದು ಬಯಲಿನಲ್ಲಿದೆ. ಅದರ ಕೇಂದ್ರದಲ್ಲಿರುವ ಬಂಗಲೆಯ ಸುತ್ತಲೂ ನೀಗ್ರೋಗಳ ಗುಡಿಸಲುಗಳಿದ್ದುವು. ಅವುಗಳ ಸಮನಾದ ಆಕಾರ ಹಾಗೂ ಸ್ಥಾನಗಳು ದಕ್ಷಿಣ ಆಫ್ರಿಕಾದಲ್ಲಿ ಇರುವ ಹೋಟೆಂಟಾಟ್ ನಿವಾಸಗಳ ಚಿತ್ರಗಳನ್ನು ನೆನಪಿಸಿದುವು. ಚಂದ್ರ ಬೇಗನೇ ಉದಯಿಸಿದ ಕಾರಣ ನಾವು ಅಂದು ತಂಗಬೇಕಾಗಿದ್ದ ಲಗೋವ ಮರಿಕಾಗೆ ಆ ಸಂಜೆಯೇ ಹೊರಡುವುದೆಂದು ತೀರ್ಮಾನಿಸಿದೆವು. ಕತ್ತಲಾಗುವ ಹೊತ್ತಿಗೆ ನಾವು ಆ ಪ್ರದೇಶದಲ್ಲಿ ಸರ್ವೇ ಸಾಮಾನ್ಯವಾಗಿದ್ದ ಕಡಿದಾಗಿ ಗಿಡಮರಗಳಿಲ್ಲದೆ ಬತ್ತಲಾಗಿದ್ದ ಗ್ರಾನೈಟು ಗುಡ್ಡವೊಂದರ ಬುಡವನ್ನು ಹಾದು ನಡೆದೆವು. ತಪ್ಪಿಸಿಕೊಂಡು ಓಡಿ ಹೋಗಿದ್ದ ಕುಖ್ಯಾತ ಗುಲಾಮರುಗಳು ಕೆಲವರು ಅದರ ಶಿಖರದಲ್ಲಿ ಒಂದಿಷ್ಟು ನೆಲವನ್ನು ಉತ್ತು ಬದುಕು ನೀಗುತ್ತಿದ್ದರಂತೆ. ಕೊನೆಗೂ ಅವರ ಪತ್ತೆಯಾಗಿ, ಬಂಧಿಸಲೆಂದು ಬಂದ ಸೈನಿಕರ ತುಕಡಿಯೊಂದು ಒಬ್ಬ ಮುದುಕಿಯ ಹೊರತಾಗಿ ಉಳಿದೆಲ್ಲರನ್ನೂ ಸೆರೆ ಹಿಡಿಯಿತಂತೆ. ಆ ಮುದುಕಿಯೋ ಗುಲಾಮಳಾಗುವುದಕ್ಕಿಂತಲೂ ಮೇಲಿಂದ ಬಿದ್ದು ಚೂರು, ಚೂರಾಗುವುದು ಮೇಲು ಎಂದು ತಿಳಿದು ಶಿಖರದಿಂದ ಕೆಳಗೆ ಹಾರಿ ಬಿದ್ದಿದ್ದಳಂತೆ. ರೋಮನ್ನರ ದಂತಕಥೆಗಳಲ್ಲಿ ಇದನ್ನು ಸ್ವಾತಂತ್ರ್ಯದ ಮೇಲಿನ ಒಲವೆಂದು ವರ್ಣಸಲಾಗುತ್ತಿತ್ತೇನೋ!  ಆದರೆ ಈ ಬಡ ನೀಗ್ರೋ ರಾಜ್ಯದಲ್ಲಿ ಅದು ಹಠಮಾರಿತನ ಎನಿಸಿತ್ತು. ನಮ್ಮ ಸವಾರಿ ಇನ್ನೂ ಕೆಲವು ಗಂಟೆಗಳು ಮುಂದುವರೆದುವು. ಹಾದಿಯ ಕೊನೆಯಂತೂ ತುಸು ಸಂಕೀರ್ಣವಾಗಿ ಬರಡಾದ ಜೌಗು ಕೆಸರು ತುಂಬಿದ ಜಾಗೆಯಲ್ಲಿ ಸಾಗಿತ್ತು. ಬೆಳದಿಂಗಳ ಮಂದಬೆಳಕಲ್ಲಿ ಅದು ಇನ್ನೂ ಬರಡಾಗಿ ತೋರುತ್ತಿತ್ತು. ಕೆಲವು ಮಿಣುಕುಹುಳಗಳು ಅತ್ತಿಂದಿತ್ತು ಜಿಗಿದಾಡಿದುವು. ಅಲ್ಲೆಲ್ಲೋ ಇದ್ದ ಏಕಾಂಗಿ ಸ್ನೈಪ್ ಹಕ್ಕಿ ಅಳುತ್ತಾ ಮೇಲೆ ಹಾರಿತು. ರಾತ್ರಿಯ ನೀರವತೆಯನ್ನು ದೂರದಲ್ಲಿದ್ದ ಸಮುದ್ರದ ಮೊರೆತ ಸೀಳಿಯೂ ಸೀಳದಂತಿತ್ತು.

ಏಪ್ರಿಲ್ 9, 1832 – ನಾವು ಮಲಗಿದ್ದ ಕೆಟ್ಟ ಸ್ಥಳವನ್ನು ಸೂರ್ಯೋದಯಕ್ಕೆ ಮೊದಲೇ ಬಿಟ್ಟು ಹೊರಟೆವು. ಸಮುದ್ರ ಹಾಗೂ ಇನ್ನೊಂದೆಡೆ ಉಪ್ಪಿನ ಹೊಂಡಗಳ ನಡುವೆ ಇದ್ದ ಕಿರಿದಾದ ಮರಳಿನ ಬಯಲಿನಲ್ಲಿ ನಮ್ಮ ಹಾದಿ ಸಾಗಿತ್ತು. ಇಗ್ರೆಟ್ಟುಗಳು ಹಾಗೂ ಕೊಕ್ಕರೆಯಂತಹ ಹಲವಾರು ಸುಂದರ ಮೀನುಗಾರ ಹಕ್ಕಿಗಳು ಹಾಗೂ ಅತ್ಯಂತ ವಿಚಿತ್ರವಾದ ಆಕಾರಗಳನ್ನು ತಳೆದಿದ್ದ ಕಳ್ಳಿಗಿಡಗಳು ಇಲ್ಲದಿದ್ದರೆ ಆ ಜಾಗದಲ್ಲೇನೂ ಸ್ವಾರಸ್ಯಕರವಾದದ್ದು ಇರಲಿಲ್ಲ. ಅಲ್ಲಿ ಬೆಳೆದಿದ್ದ ಕೆಲವೇ ಕೆಲವು ಕುಳ್ಳ ಮರಗಳನ್ನೂ ಪರೋಪಜೀವಿ ಗಿಡಗಳು ಆವರಿಸಿದ್ದವು. ಇವುಗಳಲ್ಲಿ ಕೆಲವು ಆರ್ಕಿಡ್ಡುಗಳ ಸೌಂದರ್ಯ ಹಾಗೂ ಪರಿಮಳ ಆಸ್ವಾದಿಸುವಂಥದ್ದು. ಸೂರ್ಯ ಮೇಲೇರಿದಂತೆಲ್ಲ ಹಗಲು ಬಿಸಿಯೇರಿತು. ಬಿಳಿ ಮರಳಿನಿಂದ ಪ್ರತಿಫಲನಗೊಂಡ ಪ್ರಖರ ಬೆಳಕು ತೊಂದರೆ ಕೊಡುತ್ತಿತ್ತು.  ನಾವು ಮಾಂಡೆತಿಬಾದಲ್ಲಿ ಊಟ ಮಾಡಿದೆವು. ಅಲ್ಲಿ ನೆರಳಿನಲ್ಲೂ ಥರ್ಮಾಮೀಟರು 840 ತೋರಿಸುತ್ತಿತ್ತು. ಅಲ್ಲಿದ್ದ ವಿಶಾಲವಾದ ಹೊಂಡವೊಂದರಲ್ಲಿ ಕಾಣುತ್ತಿದ್ದ ದೂರದ ಹಸಿರು ಬೆಟ್ಟಗಳ ನಿಚ್ಚಳ ಪ್ರತಿಬಿಂಬ ತುಸು ಹುರುಪು ನೀಡಿತು. ಅಲ್ಲಿದ್ದ ವೆಂಡಾ (ಪೋರ್ತುಗೀಸರ ಭಾಷೆಯಲ್ಲಿ ವೆಂಡಾ ಎಂದರೆ ಹೋಟೆಲಿನಂತಹ ಸ್ಥಳ) ಚೆನ್ನಾಗಿತ್ತು. ನನಗೆ ಅಲ್ಲಿ ಉಂಡ ಅಪರೂಪದ ಊಟದ ನೆನಪು ಇನ್ನೂ ಇದೆ. ಅದೊಂದು ವಿಶಿಷ್ಟ ಊಟ ಎನ್ನಬಹುದು. ದಪ್ಪ ಮರದ ಕಾಂಡಗಳನ್ನೇ ನೆಲದಲ್ಲಿ ನೇರವಾಗಿ ಕಂಭಗಳಂತೆ ನೆಟ್ಟು, ನಡುವೆ ರೆಂಬೆಗಳನ್ನೇ ಹೆಣೆದು ಮಾಡಿ ಮಣ್ಣು ಮೆತ್ತಿದ ಗೋಡೆಗಳ ಆ ಮನೆಗಳು ವಿಶಾಲವಾಗಿದ್ದುವು.  ನೆಲ ಬರಿದಾಗಿತ್ತು. ಗಾಜಿನ ಕಿಟಕಿಗಳು ಇರಲಇಲ್ಲ. ಆದರೆ ಛಾವಣಿಗಳು ಮಾತ್ರ ಭದ್ರವಾಗಿದ್ದುವು. ಎಲ್ಲ ಮನೆಗಳ ಮುಂಭಾಗವೂ ತೆರೆದುಕೊಂಡು ಒಂದು ಬಗೆಯ ವೆರಾಂಡಾ ಆಗಿತ್ತು. ಇಲ್ಲಿ ಕುರ್ಚಿಗಳು ಹಾಗೂ ಬೆಂಚುಗಳನ್ನು ಇರಿಸಲಾಗಿತ್ತು. ಮಲಗುವ ಕೋಣೆಗಳು ಎರಡೂ ಬದಿಯಲ್ಲೂ ಇದ್ದುವು. ಇಲ್ಲಿದ್ದ ಚಾಪೆ ಹಾಸಿದ ಮರದ ಅಟ್ಟಣಿಗೆಯ ಮೇಲೆ ಪ್ರವಾಸಿಗಳು ನಿಶ್ಚಿಂತೆಯಿಂದ ನಿದ್ರಿಸಬಹುದಿತ್ತು. ವೆಂಡಾ ಕುದುರೆಗಳಿಗೆ ಉಣಬಡಿಸಲೆಂದು ಇದ್ದ ಅಂಗಳದ ಮಧ್ಯದಲ್ಲಿ ಇತ್ತು. ಊರು ತಲುಪಿದ ಕೂಡಲೇ ಕುದುರೆಗಳ ಜೀನಿಸು ಬಿಚ್ಚಿ, ಅವುಗಳಿಗೆ ಮೆಕ್ಕೆ ಜೋಳವನ್ನು ಕೊಡುವುದು ಪರಿಪಾಠ. ಅನಂತರವಷ್ಟೆ ಅಲ್ಲಿನ ಮಹನೀಯನಿಗೆ ನಮಸ್ಕರಿಸಿ ಏನಾದರೂ ತಿನ್ನಲು ಕೊಡಲು ವಿನಂತಿಸಬೇಕು. ಸಾಮಾನ್ಯವಾಗಿ “ನಿಮಗೆ ಏನು ಬೇಕು?” ಎನ್ನುವುದೇ ಉತ್ತರವಾಗಿರುತ್ತಿತ್ತು. ಮೊದಮೊದಲು ನಾನು ಇಂತಹ ಒಳ್ಳೆಯ ಮನುಷ್ಯನ ಬಳಿ ನಮ್ಮನ್ನು ಕರೆದೊಯ್ದದ್ದಕ್ಕೆ ವಿಧಿಗೆ ಕೃತಜ್ಞತೆಯನ್ನು ಅರ್ಪಿಸಿದ್ದೆ. ಆದರೆ ಮಾತುಕತೆ ಮುಂದುವರೆದಂತೆಲ್ಲ, ಆಘಾತವುಂಟಾಯಿತು. “ಮೀನು ಸಿಗಬಹುದೇ?” “ಇಲ್ಲ ಸರ್” “ಯಾವುದಾದರೂ ಸೂಪ್?” “ಇಲ್ಲ ಸರ್”. “ಬ್ರೆಡ್ಡು?” “ಅಯ್ಯಯ್ಯೋ. ಖಾಲಿ ಸರ್.” “ಹೋಗಲಿ ಒಣಗಿದ ಮಾಂಸವಾದರೂ ಇರಬಹುದೇ?” “ ಇಲ್ಲ ಸರ್.” ಅದೃಷ್ಟವಂತರಾಗಿದ್ದರೆ ಒಂದೆರಡು ಗಂಟೆಗಳು ಕಾದ ಮೇಲೆ ಕಾಡುಕೋಳಿ, ಅನ್ನ ಮತ್ತು ಒಂದಿಷ್ಟು ಧಾನ್ಯದ ಹಿಟ್ಟು ಸಿಗುತ್ತಿತ್ತು. ಬಹಳಷ್ಟು ವೇಳೆ ನಮ್ಮ ಊಟಕ್ಕೆಂದು ಕೋಳಿಯನ್ನು ನಾವೇ ಕಲ್ಲಿನಿಂದ ಕೊಲ್ಲಬೇಕಾಗುತ್ತಿತ್ತು. ಅಂತೂ ಆಯಾಸ ಹಾಗೂ ಹಸಿವಿನಿಂದ ಹೈರಾಣಾದ ನಾವು ಸ್ವಲ್ಪ ಹಿಂಜರಿಕೆಯಿಂದಲೇ ಊಟ ಎಷ್ಟು ಹೊತ್ತಾಗಬಹುದು ಎಂದರೆ ಬಹಳಷ್ಟು ವೇಳೆ “ಅದು ಸಿದ್ಧವಾದಾಗ ಸಿಗುತ್ತದೆ.” ಎಂದು ರಾಜಗಾಂಭೀರ್ಯದಿಂದ ಸಿಗುತ್ತಿದ್ದ ಉತ್ತರ ತೃಪ್ತಿ ಕೊಡುತ್ತಿರಲಿಲ್ಲ. ನಾವು ಏನಾದರೂ ಇನ್ನೂ ಪ್ರತಿಭಟಿಸಿದಲ್ಲಿ, ನಮ್ಮ ಪ್ರಯಾಣವನ್ನು ಮುಂದುವರೆಸಬಹುದೆನ್ನುವ ಸೂಚನೆ ಸಿಗುತ್ತಿತ್ತು. ವೆಂಡಾದ ಆತಿಥೇಯರೋ ಅತಿ ಒರಟಾಗಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು8. ಅವರ ಮನೆಗಳೂ, ಅವರೂ ಕೊಳಕಾಗಿರುತ್ತಿದ್ದುವು. ಚಮಚ, ಫೋರ್ಕುಗಳು, ಚಾಕುಗಳಿಗಾಗಿಯಾದರೂ ವಸತಿ ಬೇಕಾಗುತ್ತಿತ್ತು. ಇಂಗ್ಲೆಂಡಿನಲ್ಲಿರುವ ಯಾವುದೇ ಗುಡಿಲಿರಲಿ, ಚಪ್ಪರದಲ್ಲಿಯೂ ಸಹ ಸೌಕರ್ಯಗಳಿಗೆ ಇಷ್ಟು ಬಡತನವಿಲ್ಲವೆಂದು ನಾನು ಖಂಡಿತವಾಗಿ ಹೇಳಬಲ್ಲೆ. ಕಾಂಪೋಸ್ ನಾವೋಸಿನಲ್ಲಿ ಸ್ವಲ್ಪ ಪರವಾಗಿರಲಿಲ್ಲ. ರಾತ್ರಿಯೂಟಕ್ಕೆ ಅನ್ನ, ಕೋಳಿ, ಬಿಸ್ಕತ್ತು, ವೈನ್, ಮದ್ಯ ಸೇವಿಸಿದೆವು. ಸಂಜೆ ಕಾಫಿ ಹಾಗೂ ಬೆಳಗ್ಗಿನ ಉಪಾಹಾರಕ್ಕೆ ಮೀನು ಹಾಗೂ ಕಾಫಿ ಸೇವಿಸಿದೆವು. ಇವೆಲ್ಲ ಹಾಗೂ ಕುದುರೆಗಳಿಗೂ ಒಳ್ಳೆಯ ಆಹಾರಕ್ಕೂ ತಲಾ ಕೇವಲ 2 ಶಿಲಿಂಗು 6 ಪೆನ್ಸುಗಳಷ್ಟೆ ವೆಚ್ಚವಾದುವು. ಆದರೂ, ನಮ್ಮಲ್ಲಿ ಒಬ್ಬನ ಚಾಟಿ ಕಳೆದು ಹೋಗಿತ್ತು. ಅದರ ಬಗ್ಗೆ ವಿಚಾರಿಸಿದಾಗ ಆ ವೆಂಡಾದ ಒಡೆಯ ಒರಟಾಗಿ ಹೇಳಿದ್ದು – “ನನಗೇನು ಗೊತ್ತು? ನಾಯಿಗಳು ತಿಂದಿರಬೇಕು? ಅದನ್ನು ನೀವು ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು! ”

______________________

Rio de Janeiro—Excursion north of Cape Frio—Great Evaporation—Slavery—Botofogo Bay—Terrestrial Planariæ—Clouds on the Corcovado—Heavy Rain—Musical Frogs—Phosphorescent Insects—Elater, springing powers of—Blue Haze—Noise made by a Butterfly—Entomology—Ants—Wasp killing a Spider—Parasitical Spider—Artifices of an Epeira—Gregarious Spider—Spider with an unsymmetrical Web.

RIO DE JANEIRO.

April 4th to July 5th, 1832.—A few days after our arrival I became acquainted with an Englishman who was going to visit his estate, situated rather more than a hundred miles from the capital, to the northward of Cape Frio. I gladly accepted his kind offer of allowing me to accompany him.

April 8th, 1832.—Our party amounted to seven. The first stage was very interesting. The day was powerfully hot, and as we passed through the woods, everything was motionless, excepting the large and brilliant butterflies, which lazily fluttered about. The view seen when crossing the hills behind Praia Grande was most beautiful; the colours were intense, and the prevailing tint a dark blue; the sky and the calm waters of the bay vied with each other in splendour. After passing through some cultivated country, we entered a forest which in the grandeur of all its parts could not be exceeded. We arrived by midday at Ithacaia; this small village is situated on a plain, and round the central house are the huts of the negroes. These, from their regular form and position, reminded me of the drawings of the Hottentot habitations in Southern Africa. As the moon rose early, we determined to start the same evening for our sleeping-place at the Lagoa Marica. As it was growing dark we passed under one of the massive, bare, and steep hills of granite which are so common in this country. This spot is notorious from having been, for a long time, the residence of some runaway slaves, who, by cultivating a little ground near the top, contrived to eke out a subsistence. At length they were discovered, and a party of soldiers being sent, the whole were seized with the exception of one old woman, who, sooner than again be led into slavery, dashed herself to pieces from the summit of the mountain. In a Roman matron this would have been called the noble love of freedom: in a poor negress it is mere brutal obstinacy. We continued riding for some hours. For the few last miles the road was intricate, and it passed through a desert waste of marshes and lagoons. The scene by the dimmed light of the moon was most desolate. A few fireflies flitted by us; and the solitary snipe, as it rose, uttered its plaintive cry. The distant and sullen roar of the sea scarcely broke the stillness of the night.

April 9th, 1832.—We left our miserable sleeping-place before sunrise. The road passed through a narrow sandy plain, lying between the sea and the interior salt lagoons. The number of beautiful fishing birds, such as egrets and cranes, and the succulent plants assuming most fantastical forms, gave to the scene an interest which it would not otherwise have possessed. The few stunted trees were loaded with parasitical plants, among which the beauty and delicious fragrance of some of the orchideæ were most to be admired. As the sun rose, the day became extremely hot, and the reflection of the light and heat from the white sand was very distressing. We dined at Mandetiba; the thermometer in the shade being 84°. The beautiful view of the distant wooded hills, reflected in the perfectly calm water of an extensive lagoon, quite refreshed us. As the vênda1 here was a very good one, and I have the pleasant, but rare remembrance, of an excellent dinner, I will be grateful and

  1. Vênda, the Portuguese name for an inn.

 

page 20

 

presently describe it, as the type of its class. These houses are often large, and are built of thick upright posts, with boughs interwoven, and afterwards plastered. They seldom have floors, and never glazed windows; but are generally pretty well roofed. Universally the front part is open, forming a kind of verandah, in which tables and benches are placed. The bedrooms join on each side, and here the passenger may sleep as comfortably as he can, on a wooden platform covered by a thin straw mat. The vênda stands in a courtyard, where the horses are fed. On first arriving, it was our custom to unsaddle the horses and give them their Indian corn; then, with a low bow, to ask the senhôr to do us the favour to give us something to eat. “Anything you choose, sir,” was his usual answer. For the few first times, vainly I thanked providence for having guided us to so good a man. The conversation proceeding, the case universally became deplorable. “Any fish can you do us the favour of giving ?”—”Oh no, sir.”—”Any soup?”—”No, sir.”—”Any bread?”—”Oh no, sir.”—”Any dried meat?”—”Oh no, sir.” If we were lucky, by waiting a couple of hours, we obtained fowls, rice, and farinha. It not unfrequently happened that we were obliged to kill, with stones, the poultry for our own supper. When, thoroughly exhausted by fatigue and hunger, we timorously hinted that we should be glad of our meal, the pompous, and (though true) most unsatisfactory answer was, “It will be ready when it is ready.” If we had dared to remonstrate any further, we should have been told to proceed on our journey, as being too impertinent. The hosts are most ungracious and disagreeable in their manners; their houses and their persons are often filthily dirty; the want of the accommodation of forks, knives, and spoons is common; and I am sure no cottage or hovel in England could be found in a state so utterly destitute of every comfort. At Campos Novos, however, we fared sumptuously; having rice and fowls, biscuit, wine, and spirits, for dinner; coffee in the evening, and fish with coffee for breakfast. All this, with good food for the horses, only cost 2 shillings 6 pence per head. Yet the host of this vênda, being asked if he knew anything of a whip which one of the party had lost, gruffly answered, “How should I know? why did you not take care of it?—I suppose the dogs have eaten it.”