ಬೀಗಲ್ ಸಾಹಸಯಾನ-11

ಅಧ್ಯಾಯ 2

 ರಿಯೋಡಿಜನೈರೊ ಕೇಪ್ ಫ್ರಯೋದ ಉತ್ತರಕ್ಕೊಂದು ಚಾರಣ ಅಮೋಘ ಬಾಷ್ಪೀಭವನ – ಗುಲಾಮಗಿರಿ – ಬೋಟೊಫೋಗೋ ಕೊಲ್ಲಿ -ನೆಲವಾಸಿ ಪ್ಲಾನೇರಿಯಾ – ಕೋರ್ಕೊವಾಡೊದ ಮೋಡಗಳು – ಭಾರೀ ಮಳೆ – ಹಾಡುವ ಕಪ್ಪೆಗಳು – ಮಿನುಗುವ ಕೀಟಗಳು – ಇಲೇಟರಿನ ಚಿಮ್ಮುವ ಸಾಮರ್ಥ್ಯ – ನೀಲಿ ಮಬ್ಬು – ಚಿಟ್ಟೆ ಮಾಡುವ ಸದ್ದು – ಕೀಟವಿಜ್ಞಾನ – ಇರುವೆಗಳು – ಜೇಡವನ್ನು ಕೊಂದ ಕಣಜ – ಪರಾವಲಂಬಿ ಜೇಡ – ಎಪೆಇರಾದ ಕಲೆ – ಬಕಾಸುರ ಜೇಡ – ಅಸಮವಾದ ಬಲೆ ನೇಯುವ ಜೇಡ

ರಿಯೊ ಡೆ ಜನೈರೊ

ಏಪ್ರಿಲ್ 4 ರಿಂದ ಜುಲೈ 5, 1832 – ನಾವು ಇಲ್ಲಿಗೆ ತಲುಪಿದ ಕೆಲವು ದಿನಗಳ ನಂತರ ರಾಜಧಾನಿಯಿಂದ ನೂರು ಮೈಲುಗಳಾಚೆ, ಕೇಪ್ ಫ್ರಯೋದ ಉತ್ತರಕ್ಕೆ ಇದ್ದ ತನ್ನ ಎಸ್ಟೇಟನ್ನು ನೋಡಲು ಹೊರಟಿದ್ದ ಮಹಾನುಭಾವನೊಬ್ಬನ ಪರಿಚಯವಾಯಿತು. ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಅವನ ಆಹ್ವಾನವನ್ನು ಸಂತೋಷದಿಂದಲೇ ಒಪ್ಪಿಕೊಂಡೆ.

ಏಪ್ರಿಲ್ 8, 1932.- ನಮ್ಮದು ಏಳು ಜನರ ಗುಂಪು. ಪ್ರಯಾಣದ ಮೊದಲ ಹಂತ ಸ್ವಾರಸ್ಯಕರವಾಗಿತ್ತು. ಹಗಲು ಬಲು ಬಿಸಿಯಾಗಿತ್ತು. ನಾವು ಕಾಡಿನೊಳಗಿಂದ ಸಾಗಿದಾಗ ದೊಡ್ಡ, ಹೊಳೆಯುವ ಚಿಟ್ಟೆಗಳ  ನಿಧಾನವಾದ ಹಾರಾಟವನ್ನು ಬಿಟ್ಟರೆ ಉಳಿದೆಲ್ಲವೂ ನಿಶ್ಚಲವಾಗಿತ್ತು. ಪ್ರಿಯಾ ಗ್ರಾಂಡಿಯ ಹಿಂದೆ ಇದ್ದ ಬೆಟ್ಟಗಳನ್ನು ದಾಟುವಾಗಿನ ದೃಶ್ಯವಂತೂ ಬಲು ಸುಂದರವಾಗಿತ್ತು. ಬಣ್ಣಗಳೆಲ್ಲವೂ ಗಾಢವಾಗಿ ತೋರಿದುವು. ಕಡು ನೀಲಿ ಬಣ್ಣವೇ ಪ್ರಧಾನವಾಗಿತ್ತು. ಆಕಾಶ ಹಾಗೂ ಶಾಂತವಾಗಿದ್ದ ಸಾಗರದ ನೀರು ಸೌಂದರ್ಯದಲ್ಲಿ ಒಂದನ್ನೊಂದು ಮೀರಿಸಲು ಪ್ರಯತ್ನಿಸುತ್ತಿದ್ದುವು. ಒಂದಿಷ್ಟು ಕೃಷಿ ಭೂಮಿಯನ್ನು ದಾಟಿ ಸಾಗಿದ ಮೇಲೆ ಒಂದು ಅದ್ಭುತವಾದ ಕಾಡನ್ನು ಕೂಡಿದೆವು. ಅದರ ಪ್ರತಿಯೊಂದು ಭಾಗದ ವೈಭವಕ್ಕೆ ಮಿಗಿಲಾದದ್ದು ಇಲ್ಲ. ನಡುಮಧ್ಯಾಹ್ನದ ವೇಳಗೆ ನಾವು ಇಥಾಕಿಯ ತಲುಪಿದೆವು.  ಈ ಪುಟ್ಟಹಳ್ಳಿಯೊಂದು ಬಯಲಿನಲ್ಲಿದೆ. ಅದರ ಕೇಂದ್ರದಲ್ಲಿರುವ ಬಂಗಲೆಯ ಸುತ್ತಲೂ ನೀಗ್ರೋಗಳ ಗುಡಿಸಲುಗಳಿದ್ದುವು. ಅವುಗಳ ಸಮನಾದ ಆಕಾರ ಹಾಗೂ ಸ್ಥಾನಗಳು ದಕ್ಷಿಣ ಆಫ್ರಿಕಾದಲ್ಲಿ ಇರುವ ಹೋಟೆಂಟಾಟ್ ನಿವಾಸಗಳ ಚಿತ್ರಗಳನ್ನು ನೆನಪಿಸಿದುವು. ಚಂದ್ರ ಬೇಗನೇ ಉದಯಿಸಿದ ಕಾರಣ ನಾವು ಅಂದು ತಂಗಬೇಕಾಗಿದ್ದ ಲಗೋವ ಮರಿಕಾಗೆ ಆ ಸಂಜೆಯೇ ಹೊರಡುವುದೆಂದು ತೀರ್ಮಾನಿಸಿದೆವು. ಕತ್ತಲಾಗುವ ಹೊತ್ತಿಗೆ ನಾವು ಆ ಪ್ರದೇಶದಲ್ಲಿ ಸರ್ವೇ ಸಾಮಾನ್ಯವಾಗಿದ್ದ ಕಡಿದಾಗಿ ಗಿಡಮರಗಳಿಲ್ಲದೆ ಬತ್ತಲಾಗಿದ್ದ ಗ್ರಾನೈಟು ಗುಡ್ಡವೊಂದರ ಬುಡವನ್ನು ಹಾದು ನಡೆದೆವು. ತಪ್ಪಿಸಿಕೊಂಡು ಓಡಿ ಹೋಗಿದ್ದ ಕುಖ್ಯಾತ ಗುಲಾಮರುಗಳು ಕೆಲವರು ಅದರ ಶಿಖರದಲ್ಲಿ ಒಂದಿಷ್ಟು ನೆಲವನ್ನು ಉತ್ತು ಬದುಕು ನೀಗುತ್ತಿದ್ದರಂತೆ. ಕೊನೆಗೂ ಅವರ ಪತ್ತೆಯಾಗಿ, ಬಂಧಿಸಲೆಂದು ಬಂದ ಸೈನಿಕರ ತುಕಡಿಯೊಂದು ಒಬ್ಬ ಮುದುಕಿಯ ಹೊರತಾಗಿ ಉಳಿದೆಲ್ಲರನ್ನೂ ಸೆರೆ ಹಿಡಿಯಿತಂತೆ. ಆ ಮುದುಕಿಯೋ ಗುಲಾಮಳಾಗುವುದಕ್ಕಿಂತಲೂ ಮೇಲಿಂದ ಬಿದ್ದು ಚೂರು, ಚೂರಾಗುವುದು ಮೇಲು ಎಂದು ತಿಳಿದು ಶಿಖರದಿಂದ ಕೆಳಗೆ ಹಾರಿ ಬಿದ್ದಿದ್ದಳಂತೆ. ರೋಮನ್ನರ ದಂತಕಥೆಗಳಲ್ಲಿ ಇದನ್ನು ಸ್ವಾತಂತ್ರ್ಯದ ಮೇಲಿನ ಒಲವೆಂದು ವರ್ಣಸಲಾಗುತ್ತಿತ್ತೇನೋ!  ಆದರೆ ಈ ಬಡ ನೀಗ್ರೋ ರಾಜ್ಯದಲ್ಲಿ ಅದು ಹಠಮಾರಿತನ ಎನಿಸಿತ್ತು. ನಮ್ಮ ಸವಾರಿ ಇನ್ನೂ ಕೆಲವು ಗಂಟೆಗಳು ಮುಂದುವರೆದುವು. ಹಾದಿಯ ಕೊನೆಯಂತೂ ತುಸು ಸಂಕೀರ್ಣವಾಗಿ ಬರಡಾದ ಜೌಗು ಕೆಸರು ತುಂಬಿದ ಜಾಗೆಯಲ್ಲಿ ಸಾಗಿತ್ತು. ಬೆಳದಿಂಗಳ ಮಂದಬೆಳಕಲ್ಲಿ ಅದು ಇನ್ನೂ ಬರಡಾಗಿ ತೋರುತ್ತಿತ್ತು. ಕೆಲವು ಮಿಣುಕುಹುಳಗಳು ಅತ್ತಿಂದಿತ್ತು ಜಿಗಿದಾಡಿದುವು. ಅಲ್ಲೆಲ್ಲೋ ಇದ್ದ ಏಕಾಂಗಿ ಸ್ನೈಪ್ ಹಕ್ಕಿ ಅಳುತ್ತಾ ಮೇಲೆ ಹಾರಿತು. ರಾತ್ರಿಯ ನೀರವತೆಯನ್ನು ದೂರದಲ್ಲಿದ್ದ ಸಮುದ್ರದ ಮೊರೆತ ಸೀಳಿಯೂ ಸೀಳದಂತಿತ್ತು.

ಏಪ್ರಿಲ್ 9, 1832 – ನಾವು ಮಲಗಿದ್ದ ಕೆಟ್ಟ ಸ್ಥಳವನ್ನು ಸೂರ್ಯೋದಯಕ್ಕೆ ಮೊದಲೇ ಬಿಟ್ಟು ಹೊರಟೆವು. ಸಮುದ್ರ ಹಾಗೂ ಇನ್ನೊಂದೆಡೆ ಉಪ್ಪಿನ ಹೊಂಡಗಳ ನಡುವೆ ಇದ್ದ ಕಿರಿದಾದ ಮರಳಿನ ಬಯಲಿನಲ್ಲಿ ನಮ್ಮ ಹಾದಿ ಸಾಗಿತ್ತು. ಇಗ್ರೆಟ್ಟುಗಳು ಹಾಗೂ ಕೊಕ್ಕರೆಯಂತಹ ಹಲವಾರು ಸುಂದರ ಮೀನುಗಾರ ಹಕ್ಕಿಗಳು ಹಾಗೂ ಅತ್ಯಂತ ವಿಚಿತ್ರವಾದ ಆಕಾರಗಳನ್ನು ತಳೆದಿದ್ದ ಕಳ್ಳಿಗಿಡಗಳು ಇಲ್ಲದಿದ್ದರೆ ಆ ಜಾಗದಲ್ಲೇನೂ ಸ್ವಾರಸ್ಯಕರವಾದದ್ದು ಇರಲಿಲ್ಲ. ಅಲ್ಲಿ ಬೆಳೆದಿದ್ದ ಕೆಲವೇ ಕೆಲವು ಕುಳ್ಳ ಮರಗಳನ್ನೂ ಪರೋಪಜೀವಿ ಗಿಡಗಳು ಆವರಿಸಿದ್ದವು. ಇವುಗಳಲ್ಲಿ ಕೆಲವು ಆರ್ಕಿಡ್ಡುಗಳ ಸೌಂದರ್ಯ ಹಾಗೂ ಪರಿಮಳ ಆಸ್ವಾದಿಸುವಂಥದ್ದು. ಸೂರ್ಯ ಮೇಲೇರಿದಂತೆಲ್ಲ ಹಗಲು ಬಿಸಿಯೇರಿತು. ಬಿಳಿ ಮರಳಿನಿಂದ ಪ್ರತಿಫಲನಗೊಂಡ ಪ್ರಖರ ಬೆಳಕು ತೊಂದರೆ ಕೊಡುತ್ತಿತ್ತು.  ನಾವು ಮಾಂಡೆತಿಬಾದಲ್ಲಿ ಊಟ ಮಾಡಿದೆವು. ಅಲ್ಲಿ ನೆರಳಿನಲ್ಲೂ ಥರ್ಮಾಮೀಟರು 840 ತೋರಿಸುತ್ತಿತ್ತು. ಅಲ್ಲಿದ್ದ ವಿಶಾಲವಾದ ಹೊಂಡವೊಂದರಲ್ಲಿ ಕಾಣುತ್ತಿದ್ದ ದೂರದ ಹಸಿರು ಬೆಟ್ಟಗಳ ನಿಚ್ಚಳ ಪ್ರತಿಬಿಂಬ ತುಸು ಹುರುಪು ನೀಡಿತು. ಅಲ್ಲಿದ್ದ ವೆಂಡಾ (ಪೋರ್ತುಗೀಸರ ಭಾಷೆಯಲ್ಲಿ ವೆಂಡಾ ಎಂದರೆ ಹೋಟೆಲಿನಂತಹ ಸ್ಥಳ) ಚೆನ್ನಾಗಿತ್ತು. ನನಗೆ ಅಲ್ಲಿ ಉಂಡ ಅಪರೂಪದ ಊಟದ ನೆನಪು ಇನ್ನೂ ಇದೆ. ಅದೊಂದು ವಿಶಿಷ್ಟ ಊಟ ಎನ್ನಬಹುದು. ದಪ್ಪ ಮರದ ಕಾಂಡಗಳನ್ನೇ ನೆಲದಲ್ಲಿ ನೇರವಾಗಿ ಕಂಭಗಳಂತೆ ನೆಟ್ಟು, ನಡುವೆ ರೆಂಬೆಗಳನ್ನೇ ಹೆಣೆದು ಮಾಡಿ ಮಣ್ಣು ಮೆತ್ತಿದ ಗೋಡೆಗಳ ಆ ಮನೆಗಳು ವಿಶಾಲವಾಗಿದ್ದುವು.  ನೆಲ ಬರಿದಾಗಿತ್ತು. ಗಾಜಿನ ಕಿಟಕಿಗಳು ಇರಲಇಲ್ಲ. ಆದರೆ ಛಾವಣಿಗಳು ಮಾತ್ರ ಭದ್ರವಾಗಿದ್ದುವು. ಎಲ್ಲ ಮನೆಗಳ ಮುಂಭಾಗವೂ ತೆರೆದುಕೊಂಡು ಒಂದು ಬಗೆಯ ವೆರಾಂಡಾ ಆಗಿತ್ತು. ಇಲ್ಲಿ ಕುರ್ಚಿಗಳು ಹಾಗೂ ಬೆಂಚುಗಳನ್ನು ಇರಿಸಲಾಗಿತ್ತು. ಮಲಗುವ ಕೋಣೆಗಳು ಎರಡೂ ಬದಿಯಲ್ಲೂ ಇದ್ದುವು. ಇಲ್ಲಿದ್ದ ಚಾಪೆ ಹಾಸಿದ ಮರದ ಅಟ್ಟಣಿಗೆಯ ಮೇಲೆ ಪ್ರವಾಸಿಗಳು ನಿಶ್ಚಿಂತೆಯಿಂದ ನಿದ್ರಿಸಬಹುದಿತ್ತು. ವೆಂಡಾ ಕುದುರೆಗಳಿಗೆ ಉಣಬಡಿಸಲೆಂದು ಇದ್ದ ಅಂಗಳದ ಮಧ್ಯದಲ್ಲಿ ಇತ್ತು. ಊರು ತಲುಪಿದ ಕೂಡಲೇ ಕುದುರೆಗಳ ಜೀನಿಸು ಬಿಚ್ಚಿ, ಅವುಗಳಿಗೆ ಮೆಕ್ಕೆ ಜೋಳವನ್ನು ಕೊಡುವುದು ಪರಿಪಾಠ. ಅನಂತರವಷ್ಟೆ ಅಲ್ಲಿನ ಮಹನೀಯನಿಗೆ ನಮಸ್ಕರಿಸಿ ಏನಾದರೂ ತಿನ್ನಲು ಕೊಡಲು ವಿನಂತಿಸಬೇಕು. ಸಾಮಾನ್ಯವಾಗಿ “ನಿಮಗೆ ಏನು ಬೇಕು?” ಎನ್ನುವುದೇ ಉತ್ತರವಾಗಿರುತ್ತಿತ್ತು. ಮೊದಮೊದಲು ನಾನು ಇಂತಹ ಒಳ್ಳೆಯ ಮನುಷ್ಯನ ಬಳಿ ನಮ್ಮನ್ನು ಕರೆದೊಯ್ದದ್ದಕ್ಕೆ ವಿಧಿಗೆ ಕೃತಜ್ಞತೆಯನ್ನು ಅರ್ಪಿಸಿದ್ದೆ. ಆದರೆ ಮಾತುಕತೆ ಮುಂದುವರೆದಂತೆಲ್ಲ, ಆಘಾತವುಂಟಾಯಿತು. “ಮೀನು ಸಿಗಬಹುದೇ?” “ಇಲ್ಲ ಸರ್” “ಯಾವುದಾದರೂ ಸೂಪ್?” “ಇಲ್ಲ ಸರ್”. “ಬ್ರೆಡ್ಡು?” “ಅಯ್ಯಯ್ಯೋ. ಖಾಲಿ ಸರ್.” “ಹೋಗಲಿ ಒಣಗಿದ ಮಾಂಸವಾದರೂ ಇರಬಹುದೇ?” “ ಇಲ್ಲ ಸರ್.” ಅದೃಷ್ಟವಂತರಾಗಿದ್ದರೆ ಒಂದೆರಡು ಗಂಟೆಗಳು ಕಾದ ಮೇಲೆ ಕಾಡುಕೋಳಿ, ಅನ್ನ ಮತ್ತು ಒಂದಿಷ್ಟು ಧಾನ್ಯದ ಹಿಟ್ಟು ಸಿಗುತ್ತಿತ್ತು. ಬಹಳಷ್ಟು ವೇಳೆ ನಮ್ಮ ಊಟಕ್ಕೆಂದು ಕೋಳಿಯನ್ನು ನಾವೇ ಕಲ್ಲಿನಿಂದ ಕೊಲ್ಲಬೇಕಾಗುತ್ತಿತ್ತು. ಅಂತೂ ಆಯಾಸ ಹಾಗೂ ಹಸಿವಿನಿಂದ ಹೈರಾಣಾದ ನಾವು ಸ್ವಲ್ಪ ಹಿಂಜರಿಕೆಯಿಂದಲೇ ಊಟ ಎಷ್ಟು ಹೊತ್ತಾಗಬಹುದು ಎಂದರೆ ಬಹಳಷ್ಟು ವೇಳೆ “ಅದು ಸಿದ್ಧವಾದಾಗ ಸಿಗುತ್ತದೆ.” ಎಂದು ರಾಜಗಾಂಭೀರ್ಯದಿಂದ ಸಿಗುತ್ತಿದ್ದ ಉತ್ತರ ತೃಪ್ತಿ ಕೊಡುತ್ತಿರಲಿಲ್ಲ. ನಾವು ಏನಾದರೂ ಇನ್ನೂ ಪ್ರತಿಭಟಿಸಿದಲ್ಲಿ, ನಮ್ಮ ಪ್ರಯಾಣವನ್ನು ಮುಂದುವರೆಸಬಹುದೆನ್ನುವ ಸೂಚನೆ ಸಿಗುತ್ತಿತ್ತು. ವೆಂಡಾದ ಆತಿಥೇಯರೋ ಅತಿ ಒರಟಾಗಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು8. ಅವರ ಮನೆಗಳೂ, ಅವರೂ ಕೊಳಕಾಗಿರುತ್ತಿದ್ದುವು. ಚಮಚ, ಫೋರ್ಕುಗಳು, ಚಾಕುಗಳಿಗಾಗಿಯಾದರೂ ವಸತಿ ಬೇಕಾಗುತ್ತಿತ್ತು. ಇಂಗ್ಲೆಂಡಿನಲ್ಲಿರುವ ಯಾವುದೇ ಗುಡಿಲಿರಲಿ, ಚಪ್ಪರದಲ್ಲಿಯೂ ಸಹ ಸೌಕರ್ಯಗಳಿಗೆ ಇಷ್ಟು ಬಡತನವಿಲ್ಲವೆಂದು ನಾನು ಖಂಡಿತವಾಗಿ ಹೇಳಬಲ್ಲೆ. ಕಾಂಪೋಸ್ ನಾವೋಸಿನಲ್ಲಿ ಸ್ವಲ್ಪ ಪರವಾಗಿರಲಿಲ್ಲ. ರಾತ್ರಿಯೂಟಕ್ಕೆ ಅನ್ನ, ಕೋಳಿ, ಬಿಸ್ಕತ್ತು, ವೈನ್, ಮದ್ಯ ಸೇವಿಸಿದೆವು. ಸಂಜೆ ಕಾಫಿ ಹಾಗೂ ಬೆಳಗ್ಗಿನ ಉಪಾಹಾರಕ್ಕೆ ಮೀನು ಹಾಗೂ ಕಾಫಿ ಸೇವಿಸಿದೆವು. ಇವೆಲ್ಲ ಹಾಗೂ ಕುದುರೆಗಳಿಗೂ ಒಳ್ಳೆಯ ಆಹಾರಕ್ಕೂ ತಲಾ ಕೇವಲ 2 ಶಿಲಿಂಗು 6 ಪೆನ್ಸುಗಳಷ್ಟೆ ವೆಚ್ಚವಾದುವು. ಆದರೂ, ನಮ್ಮಲ್ಲಿ ಒಬ್ಬನ ಚಾಟಿ ಕಳೆದು ಹೋಗಿತ್ತು. ಅದರ ಬಗ್ಗೆ ವಿಚಾರಿಸಿದಾಗ ಆ ವೆಂಡಾದ ಒಡೆಯ ಒರಟಾಗಿ ಹೇಳಿದ್ದು – “ನನಗೇನು ಗೊತ್ತು? ನಾಯಿಗಳು ತಿಂದಿರಬೇಕು? ಅದನ್ನು ನೀವು ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು! ”

______________________

Rio de Janeiro—Excursion north of Cape Frio—Great Evaporation—Slavery—Botofogo Bay—Terrestrial Planariæ—Clouds on the Corcovado—Heavy Rain—Musical Frogs—Phosphorescent Insects—Elater, springing powers of—Blue Haze—Noise made by a Butterfly—Entomology—Ants—Wasp killing a Spider—Parasitical Spider—Artifices of an Epeira—Gregarious Spider—Spider with an unsymmetrical Web.

RIO DE JANEIRO.

April 4th to July 5th, 1832.—A few days after our arrival I became acquainted with an Englishman who was going to visit his estate, situated rather more than a hundred miles from the capital, to the northward of Cape Frio. I gladly accepted his kind offer of allowing me to accompany him.

April 8th, 1832.—Our party amounted to seven. The first stage was very interesting. The day was powerfully hot, and as we passed through the woods, everything was motionless, excepting the large and brilliant butterflies, which lazily fluttered about. The view seen when crossing the hills behind Praia Grande was most beautiful; the colours were intense, and the prevailing tint a dark blue; the sky and the calm waters of the bay vied with each other in splendour. After passing through some cultivated country, we entered a forest which in the grandeur of all its parts could not be exceeded. We arrived by midday at Ithacaia; this small village is situated on a plain, and round the central house are the huts of the negroes. These, from their regular form and position, reminded me of the drawings of the Hottentot habitations in Southern Africa. As the moon rose early, we determined to start the same evening for our sleeping-place at the Lagoa Marica. As it was growing dark we passed under one of the massive, bare, and steep hills of granite which are so common in this country. This spot is notorious from having been, for a long time, the residence of some runaway slaves, who, by cultivating a little ground near the top, contrived to eke out a subsistence. At length they were discovered, and a party of soldiers being sent, the whole were seized with the exception of one old woman, who, sooner than again be led into slavery, dashed herself to pieces from the summit of the mountain. In a Roman matron this would have been called the noble love of freedom: in a poor negress it is mere brutal obstinacy. We continued riding for some hours. For the few last miles the road was intricate, and it passed through a desert waste of marshes and lagoons. The scene by the dimmed light of the moon was most desolate. A few fireflies flitted by us; and the solitary snipe, as it rose, uttered its plaintive cry. The distant and sullen roar of the sea scarcely broke the stillness of the night.

April 9th, 1832.—We left our miserable sleeping-place before sunrise. The road passed through a narrow sandy plain, lying between the sea and the interior salt lagoons. The number of beautiful fishing birds, such as egrets and cranes, and the succulent plants assuming most fantastical forms, gave to the scene an interest which it would not otherwise have possessed. The few stunted trees were loaded with parasitical plants, among which the beauty and delicious fragrance of some of the orchideæ were most to be admired. As the sun rose, the day became extremely hot, and the reflection of the light and heat from the white sand was very distressing. We dined at Mandetiba; the thermometer in the shade being 84°. The beautiful view of the distant wooded hills, reflected in the perfectly calm water of an extensive lagoon, quite refreshed us. As the vênda1 here was a very good one, and I have the pleasant, but rare remembrance, of an excellent dinner, I will be grateful and

  1. Vênda, the Portuguese name for an inn.

 

page 20

 

presently describe it, as the type of its class. These houses are often large, and are built of thick upright posts, with boughs interwoven, and afterwards plastered. They seldom have floors, and never glazed windows; but are generally pretty well roofed. Universally the front part is open, forming a kind of verandah, in which tables and benches are placed. The bedrooms join on each side, and here the passenger may sleep as comfortably as he can, on a wooden platform covered by a thin straw mat. The vênda stands in a courtyard, where the horses are fed. On first arriving, it was our custom to unsaddle the horses and give them their Indian corn; then, with a low bow, to ask the senhôr to do us the favour to give us something to eat. “Anything you choose, sir,” was his usual answer. For the few first times, vainly I thanked providence for having guided us to so good a man. The conversation proceeding, the case universally became deplorable. “Any fish can you do us the favour of giving ?”—”Oh no, sir.”—”Any soup?”—”No, sir.”—”Any bread?”—”Oh no, sir.”—”Any dried meat?”—”Oh no, sir.” If we were lucky, by waiting a couple of hours, we obtained fowls, rice, and farinha. It not unfrequently happened that we were obliged to kill, with stones, the poultry for our own supper. When, thoroughly exhausted by fatigue and hunger, we timorously hinted that we should be glad of our meal, the pompous, and (though true) most unsatisfactory answer was, “It will be ready when it is ready.” If we had dared to remonstrate any further, we should have been told to proceed on our journey, as being too impertinent. The hosts are most ungracious and disagreeable in their manners; their houses and their persons are often filthily dirty; the want of the accommodation of forks, knives, and spoons is common; and I am sure no cottage or hovel in England could be found in a state so utterly destitute of every comfort. At Campos Novos, however, we fared sumptuously; having rice and fowls, biscuit, wine, and spirits, for dinner; coffee in the evening, and fish with coffee for breakfast. All this, with good food for the horses, only cost 2 shillings 6 pence per head. Yet the host of this vênda, being asked if he knew anything of a whip which one of the party had lost, gruffly answered, “How should I know? why did you not take care of it?—I suppose the dogs have eaten it.”

 

 

 

ನಿಮ್ಮ ಟಿಪ್ಪಣಿ ಬರೆಯಿರಿ